

ಕಂಪ್ಲಿ: ಜಿಲ್ಲಾ ಉಸ್ತುವಾರಿ ಸಚಿವರು ತಾಲೂಕುವಾರು ಕೆಡಿಪಿ ಸಭೆ ನಡೆಸಲಿದ್ದು, ಅವರಿಂದ ದಿನಾಂಕ ಪಡೆದು ಕೆಡಿಪಿ ಸಭೆ ಆಯೋಜಿಸಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಇಲ್ಲಿನ ಷಾ.ಮಿಯಾಚಂದ್ ಸರ್ಕಾರಿ ಪಿಯು ಕಾಲೇಜು ಎದುರಿಗೆ ನಿರ್ಮಿಸಿದ ಪೊಲೀಸ್ ಠಾಣೆ ಕಟ್ಟಡ ಉದ್ಘಾಟಿಸಿ ಮಾತನಾಡಿ, ಅಗ್ನಿಶಾಮಕ ದಳ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಮಾತನಾಡಿ, ಆಧುನಿಕತೆ ಅಳವಡಿಸಿಕೊಂಡ ವಿಶೇಷ ಸೌಲಭ್ಯವುಳ್ಳ ಠಾಣೆಯಾಗಿದೆ. ಪೊಲೀಸ್ ಸಿಬ್ಬಂದಿಗೆ ಕ್ವಾರ್ಟರ್ಸ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪಟ್ಟಣ ಸೇರಿ ಜಿಲ್ಲೆಯ ಅಯ್ದ ಸ್ಥಳಗಳ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ಎಸ್ಟಿಮೇಟ್ ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗುವುದು. ಪಟ್ಟಣದಲ್ಲಿ ಟ್ರಾಫಿಕ್ ಪೊಲೀಸ್ ಆಯೋಜನೆ ಕುರಿತ ಪ್ರಶ್ನೆಗೆ ಈ ಕುರಿತು ಪರಿಶೀಲಿಸಲಾಗುವುದು ಎಂದರು. ಪಾಠಶಾಲೆ ಪ್ರಾಚಾರ್ಯ ಘನಮಠಯ್ಯ ಹಿರೇಮಠ ಮತ್ತು ಶಿಷ್ಯಂದಿರು ಪೂಜಾ ಪೌರೋಹಿತ್ಯ ವಹಿಸಿದ್ದರು.
ಐಜಿ ಬಿ.ಎಸ್.ಲೋಕೇಶ್‌ಕುಮಾರ್, ಅಡಿಷನಲ್ ಎಸ್‌ಪಿ ಎಂ.ಎ.ನಟರಾಜ, ಡಿಎಸ್‌ಪಿ ಪ್ರಸಾದ ಕೆ.ಗೋಖಲೆ, ಪಿಐಗಳಾದ ಕೆ.ಬಿ.ವಾಸುಕುಮಾರ, ಮಹೇಶಗೌಡ, ಪ್ರಮುಖರಾದ ಕೆ.ಶ್ರೀನಿವಾಸರಾವ್, ಭಟ್ಟ ಪ್ರಸಾದ್, ಹೊನ್ನೂರವಲಿ, ಎಂ.ಸುಧೀರ್, ಅರವಿ ಬಸವನಗೌಡ, ಕೆ.ಮಸ್ತಾನ್‌ಸಾಬ್ ಇತರರಿದ್ದರು.
15ಕೆಎಂಪಿ06ಎ