ಸಿಸಿ ಟಿವಿಯಲ್ಲಿ ಚಿರತೆ ಓಡಾಟ ಸೆರೆ

4Khanapur7-Web
ಖಾನಾಪುರ ತಾಲೂಕಿನ ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡ ವಾಟರಾ ಗ್ರಾಮದ ಮನೆಯೊಂದರ ಮುಂದೆ ದಾಟಿಹೋದ ಚಿರತೆಯ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
Published on

ಖಾನಾಪುರ: ತಾಲೂಕಿನ ಮೋಹಿಶೆತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಟರೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ 2.14ಕ್ಕೆ ಚಿರತೆ ಓಡಾಡಿರುವ ದೃಶ್ಯ ಗ್ರಾಮದ ಮನೆಯೊಂದರ ಮುಂದೆ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜನನಿಬಿಡ ಪ್ರದೇಶಕ್ಕೆ ಕ್ರೂರ ಮೃಗ ಬಂದು ಹೋಗಿದ್ದರಿಂದ ಜನರು ಭಯಭೀತರಾಗಿದ್ದಾರೆ.

ಅರಣ್ಯದಿಂದ ರಾತ್ರಿ ಗ್ರಾಮ ಪ್ರವೇಶಿಸಿದ ಚಿರತೆ ಗ್ರಾಮದ ಕಾಂಕ್ರೀಟ್ ರಸ್ತೆಯಲ್ಲಿ ರಾಜಾರೋಷವಾಗಿ ಸಂಚರಿಸಿದೆ. ಸಿಸಿ ಕ್ಯಾಮರಾ ಅಳವಡಿಸಿದ್ದ ಮನೆಯ ಮೆಟ್ಟಿಲಿನವರೆಗೆ ಚಿರತೆ ಬಂದಿರುವ ದೃಶ್ಯಾವಳಿ ಸೆರೆಯಾಗಿವೆ. ಮಾಹಿತಿ ತಿಳಿದ ಸಹಾಯಕ ಅರಣ್ಯ ಸಂರಕ್ಷಕ ಶಶಿಧರ, ಇಲಾಖೆಯ ಸಿಬ್ಬಂದಿಯೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗ್ರಾಮಕ್ಕೆ ಬಂದ ಚಿರತೆ ಗ್ರಾಮದಲ್ಲಿ ಒಂದು ಸುತ್ತು ಸಂಚರಿಸಿ ಬೀದಿ ನಾಯಿಯನ್ನು ಹೊತ್ತೊಯ್ದು ಬೆಳಗಾವಿ- ಗೋವಾ ರಾಷ್ಟ್ರೀಯ ಹೆದ್ದಾರಿ ದಾಟಿ ಅರಣ್ಯಕ್ಕೆ ಮರಳಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಾತ್ರಿ ಗಸ್ತು ಹೆಚ್ಚಿಸಲಾಗುವುದು. ಸಾರ್ವಜನಿಕರು ರಾತ್ರಿಯ ಹೊತ್ತು ಮನೆಯಿಂದ ಹೊರಬರಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು
ವಾಟರೆ ಮತ್ತು ಸುತ್ತಲಿನ ಗ್ರಾಮಗಳ ಗ್ರಾಮಸ್ಥರಿಗೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net