ಸಮಾಜ ನಿರ್ಮಾಣದಲ್ಲಿ ವಕೀಲರ ಪಾತ್ರ ಪ್ರಮುಖ

27blh1 law college
Published on

ಬೈಲಹೊಂಗಲ: ಜನರಿಗೆ ಕಾನೂನಿನ ಮಾರ್ಗದರ್ಶನ ನೀಡುತ್ತ ಶಾಂತಿ, ಸೌಹಾರ್ದಯುತ ಸಮಾಜ ಕಟ್ಟುವಲ್ಲಿ ವಕೀಲರ ಪಾತ್ರ ಪ್ರಮುಖವಾಗಿದೆ ಎಂದು ಧಾರವಾಡ ಹೆಕೋರ್ಟ್​ ವಕೀಲ ಶಿವರಾಜ ಬೆಳ್ಳಕ್ಕಿ ಹೇಳಿದರು.

ಪಟ್ಟಣದ ಎಚ್​.ವಿ. ಕೌಜಲಗಿ ಕಾನೂನು ಮಹಾವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಕೀಲಿ ವೃತ್ತಿ ಪರಿಪೂರ್ಣವಾಗಿ ಕಲಿಯಬೇಕು. ಭಾಷಾ ಕೌಶಲ ಸುಧಾರಿಸಲು ಹಲವು ವಿಷಯಗಳನ್ನು ಅರಿಯಬೇಕು. ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ಅಭ್ಯಾಸ ಮಾಡಬೇಕು ಎಂದರು.

ಕೆಆರ್​ಸಿಎಸ್​ ಶಿಣ ಸಂಸ್ಥೆಯ ಉಪಸಮಿತಿ ಚೇರ್ಮನ್​ ಶಿರೀಷ ತುಡವೇಕರ, ಪ್ರಾಚಾರ್ಯ ಪಿ.ಎನ್​. ಪಾಟೀಲ, ಉಪನ್ಯಾಸಕ ಡಿ.ಬಿ. ನರಗುಂದ, ಎಂ.ಎಸ್​. ಪಟ್ಟಣಶೆಟ್ಟಿ, ವಿದ್ಯಾರ್ಥಿ ಪ್ರತಿನಿಧಿ ರಮ್ಯಾ ಉರಬಿನ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net