

ಭಾಲ್ಕಿ: ಶನಿವಾರ ಸುರಿದ ಭಾರಿ ಮಳೆಯಿಂದ ಕಾರಂಜಾ ನದಿ ಪಾತ್ರದಲ್ಲಿರುವ ಹೊಲಗಳಲ್ಲಿ ಬೆಳೆದ ಬೆಳೆಗಳೆಲ್ಲಾ ಜಲಾವೃತಗೊಂಡು ಬೆಳೆಗಳು ಸಂಪೂರ್ಣ ನಾಶವಾಗಿವೆ.
ಕಾರಂಜಾ ನದಿ ಪಾತ್ರದ ಗೋದಿಹಿಪ್ಪರಗಿ, ಚಂದಾಪುರ, ಬಾಳೂರ, ದಾಡಗಿ, ಕುರುಬಖೇಳಗಿ, ಡಾವರಗಾಂವ, ಕಣಜಿ, ಜ್ಯಾಂತಿ, ನೇಳಗಿ ಗ್ರಾಮಗಳ ಹಲವಾರು ರೈತರ ಹೊಲಗಳಿಗೆ ನೀರು ನುಗ್ಗಿ ಬೆಳೆದ ಬೆಳೆಗಳಾದ ತೊಗರಿ, ಸೋಯಾ ಅವರೆ, ಉದ್ದು, ಹೆಸರು ಬೆಳಗಳು ಸಂಪೂರ್ಣ ನಾಶವಾಗಿದ್ದು, ಈ ಭಾಗದ ರೈತರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
ಭಾರಿ ಮಳೆಯೊಂದಿಗೆ ಕಾರಂಜಾ ಡ್ಯಾಂನಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡಿದ್ದರಿಂದ ನದಿ ಪಾತ್ರದಲ್ಲಿರುವ ರೈತರ ಬೆಳೆಗಳು ನೀರು ನುಗ್ಗಿ ಸಂಪೂರ್ಣ ನಾಶವಾಗಿದೆ. ಹೀಗಾಗಿ ಹಾನಿಯ ಬಗ್ಗೆ ಸೂಕ್ತ ತನಿಖೆ ನಡೆಸಿ ಸರ್ಕಾರ ಪರಿಹಾರ ನೀಡಬೇಕು ಎಂದು ವಾಲ್ಮೀಕಿ ಸಮಾಜದ ಸಿದ್ದು ಜಮಾದಾರ ಆಗ್ರಹಿಸಿದ್ದಾರೆ.