

ಬೈಲಹೊಂಗಲ: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕ, ಶಿಕ್ಷಕಿಯರ ಸಹಕಾರಿ ಪತ್ತಿನ ಸಂಘವು 2022-23ನೇ ಸಾಲಿನಲ್ಲಿ 51,26,062 ರೂ. ನಿವ್ವಳ ಲಾಭ ಗಳಿಸಿದೆ ಎಂದು ಕೆ.ಯು.ಉಳ್ಳೆಗಡ್ಡಿ ಹೇಳಿದರು.
ಪಟ್ಟಣದ ಶಿವಬಸವ ಕಲ್ಯಾಣ ಮಂಟಪದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕ, ಶಿಕ್ಷಕಿಯರ ಸಹಕಾರಿ ಪತ್ತಿನ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸದಸ್ಯರ ಬ್ಯಾಂಕ್ ಖಾತೆಗೆ ಶೇ. 6 ಡಿವಿಡೆಂಡ್ ಜಮೆ ಮಾಡಲಾಗವುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಮಾಜಿ ಸದಸ್ಯೆ ರೋಹಿಣಿ ಪಾಟೀಲ ಮಾತನಾಡಿ, ಶಿಕ್ಷಕರ ಸಹಕಾರಿ ಸಂಘವು ಉತ್ತಂಗಕ್ಕೆರಲಿ ಎಂದರು. ಏಣಗಿ ಬಂಗಾರಜ್ಜನಮಠದ ವಿರೂಪಾಕ್ಷ ಶ್ರೀ ಸಾನ್ನಿಧ್ಯ ವಹಿಸಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್.ಪ್ಯಾಟಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಕಾಶ ಮೆಳವಂಕಿ, ಎಸ್.ಡಿ.ಗಂಗಣ್ಣವರ, ಎಸ್.ಬಿ.ಕುಡಸೋಮನ್ನವರ, ಎಸ್.ಜಿ.ಬೆಳಗಾವಿ, ಬಿ.ಡಿ.ತಮ್ಮನ್ನವರ, ಉಪಾಧ್ಯಕ್ಷ ಬಿ.ಬಿ.ಸರಾಯದ, ಕಾರ್ಯದರ್ಶಿ ಎಂ.ಕೆ.ಹಾರುಗೊಪ್ಪ, ನಿರ್ದೇಶಕರಾದ ಬಿ.ಎಸ್.ಜಕಾತಿ, ಎಸ್.ಎಸ್. ಪಾಟೀಲ, ಆರ್.ಎನ್.ರುದ್ರನಾಯ್ಕರ, ವಿ.ಎಸ್.ಹುಣಶೀಕಟ್ಟಿ, ಡಿ.ಆರ್.ಮುಗುಟಖಾನ್, ಎಸ್.ಆರ್.ಪಾಟೀಲ, ಎಚ್.ಬಿ.ಕುಲಕರ್ಣಿ, ಎಸ್.ಜಿ.ಹಿರೇಮಠ, ಎಸ್.ವಿ.ನರಸನ್ನವರ,ಆರ್.ಎನ್.ಇಂಗಳಗಿ, ಮಹೇಶ ಕಾಮೋಜಿ ಇತರರು ಇದ್ದರು.