ಬಳ್ಳಾರಿ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವಕ್ಫ್ ಕಾಯ್ದೆ ದುರುಪಯೋಗಿಸಿಕೊಂಡು, ರೈತರ ಜಮೀನು ಹೊಡೆಯುವ ಕೆಲಸ ಮಾಡುತ್ತಿದ್ದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ನಗರದ ರಾಯಲ್ ವೃತ್ತದಿಂದ ಡಿಸಿ ಕಚೇರಿಯವರೆಗೆ ವಕ್ಫ್ ಕಾಯ್ದೆ ವಿರೋಧಿಸಿ ಪ್ರತಿಭಟಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು. ಆದ್ದರಿಂದ, ರಾಜ್ಯದಲ್ಲಿ ವಕೀಲರ ನೇತ್ವದಲ್ಲಿ ಕಮಿಟಿ ರಚಿಸಲಾಗುವುದು. ಯಾರೆಲ್ಲ ರೈತರಿಗೆ ಅನ್ಯಾಯ ಆಗಿದೆ ಅವರೆಲ್ಲರೂ ಕಮಿಟಿ ಬಳಿ ಹೇಳಿಕೊಳ್ಳಿ. ರಾಜ್ಯದ ಒಂದಿಂಚೂ ಭೂಮಿಯನ್ನು ವಕ್ಫ್‌ಗೆ ಬಿಟ್ಟುಕೊಡುವುದಿಲ್ಲ.ಯಾವುದೆ ಕಾರಣಕ್ಕೂ ರೈತರು ಹೆದರಬೇಡಿ ಎಂದು ಧೈರ್ಯ ತುಂಬಿದರು. ದೇಶ ವಿರೋಧಿ ಸಚಿವ ಜಮೀರ್ ಅಹ್ಮದ್ ಹಲ್ಕಟ ಇಂತಹ ನೀಚ ಕೆಲಸ ಮಾಡಿದ್ದಾರೆೆ. ರಾಜ್ಯದ ಮಠ ಮಾನ್ಯಗಳ ಹಾಗೂ ದಲಿತರ ಜಮೀನು ಕಬಳಿಸಲು ಯತ್ನಿಸಿದ್ದಾರೆ. ಈಗಾಗಲೇ ಕಲಬುರಗಿ, ಕೊಪ್ಪಳ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಯ ಜಮೀನುಗಳನ್ನು ವಕ್ಫ್ ಹೆಸರಿಗೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅಹಿಂದ ಹೆಸರು ಹೇಳಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಜಮೀರ್ ಎಂಬ 420 ವ್ಯಕ್ತಿಯನ್ನು ಇಟ್ಟುಕೊಂಡು ಹೀಗೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಕೇಂದ್ರ ಸರ್ಕಾರ ಇದರ ತನಿಖೆ ನಡೆಸಲು ಕ್ಯಾಬಿನೆಟ್‌ನಲ್ಲಿ ಸಬ್ ಕಮಿಟಿ ರಚನೆ ಮಾಡಲಾಗಿದೆ. ಈ ವರದಿ ಬಿಡುಗಡೆಯಾಗುತ್ತದೆ ಎಂಬ ಕಾರಣಕ್ಕೆ ರೈತರಿಗೆ ನೀಡಿರುವ ನೋಟಿಸ್ ವಾಪಾಸ್ ಪಡೆದಿದ್ದಾರೆ. ಸಿದ್ದರಾಮಯ್ಯ ಅವರೇ ನಿಮ್ಮವು 99 ತಪ್ಪುಗಳು ಆಗಿವೆ, ದೇವರು ಎಲ್ಲವೂ ನೋಡುತ್ತಿದ್ದಾನೆ. ಮುಂದಿನ ದಿನಗಳಲ್ಲಿ ತಕ್ಕ ಶಾಸ್ತಿಯಾಗಲಿದೆ. ನೀವು ಪ್ರಾಮಾಣಿಕರಾಗಿದ್ದಾರೆ ರಾಜೀನಾಮೆ ನೀಡಿ ಮನೆಗೆ ಹೋಗಿ ಎಂದರು.
ಪ್ರತಿಭಟನೆಗೂ ಮುನ್ನ ಸುದ್ದಿಗಾರರೊಂದಿಗೆ ಬಿ. ವೈ. ವಿಜಯೇಂದ್ರ ಮಾತನಾಡಿ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಕುತಂತ್ರ ಮಾಡಿದರೆ ಬಿಜೆಪಿ ರಣತಂತ್ರ ಹೂಡಲಿದೆ. ಸಂಡೂರಿನಲ್ಲಿ ಜನರು ಈ ಬಾರಿ ಬದಲಾವಣೆ ಬಯಸಿದ್ದು ಬಿಜೆಪಿ ಇತಿಹಾಸ ಸೃಷ್ಟಿಸಲಿದೆ. ವಿಜಯೇಂದ್ರ ಇರುವರೆಗೂ ಉಪಚುನಾವಣೆ ಪ್ರಚಾರಕ್ಕೆ ಹೋಗಲ್ಲ ಎಂದಿದ್ದ ಶಾಸಕರಾದ ಬಸವಗೌಡ ಪಾಟೀಲ್ ಯತ್ನಾಳ್, ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ ಅವರ ಹೇಳಿಕೆಗೆ ಬಿಜೆಪಿಯಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ. ರಾಜ್ಯದಲ್ಲಿ ಮೂರು ಉಪಚುನಾವಣೆಗಳು ನಡೆಯುವುದು ವಿಜಯೇಂದ್ರ ಎಂಬ ಶಕ್ತಿಯಿಂದ ಅಲ್ಲ, ಕಾರ್ಯಕರ್ತರ ಶಕ್ತಿಯಿಂದ. ಪುಕ್ಸಟೆ ಮಾತನಾಡುವರಿಗೆ ಕೆಲವೆ ದಿನಗಳಲ್ಲಿ ಉತ್ತರ ಸಿಗಲಿದೆ ಎಂದು ತಿರುಗೇಟು ನೀಡಿದರು. ಸಿಎಂ ಸಿದ್ದರಾಮಯ್ಯ ಪಿತೂರಿಯಿಂದ ಜಮೀರ್ ಎಂಬ ದೇಶದ್ರೋಹಿಯಿಂದ ಜಮೀನು ಕಬಳಿಸುವ ಕೆಲಸವಾಗುತ್ತಿದೆ. ಜಮೀರ್ ಸಚಿವರಾಗಿ ಅಧಿಕಾರಿಗಳನ್ನು ಬೆದರಿಸಿ ಜಮೀನು ಮಠ ಮಾನ್ಯ ಸೇರಿದ 15 ಸಾವಿರ ಎಕರೆ ಜಮೀನು ಕಬಳಿಸುವ ಯತ್ನ ನಡೆದಿದೆ. ಸಿಎಂ ಸಿದ್ದರಾಮಯ್ಯಗೆ ತಾಕತ್ ಇದ್ದಾರೆ ಕಾಂಗ್ರೆಸ್ ಪುಡಾರಿಗಳ ವಕ್ಫ್ ಜಮೀನು ಕಬಳಿಸಿದ್ದಾರೆ ಅದನ್ನು ಮೊದಲು ವಾಪಸ್ ಪಡೆಯಲಿ ಎಂದು ಸವಾಲು ಹಾಕಿದರು. ಮಾಜಿ ಸಿಎಂ ಯಡಿಯೂರಪ್ಪ ,ಬೊಮ್ಮಾಯಿ ಅಧಿಕಾರದ ವೇಳೆ ನೋಟಿಸ್ ನೀಡಿದ್ದಾರೆ ಎಂಬ ವಿಚಾರಕ್ಕೆ ರೈತರ ಆಸ್ತಿ ವಕ್ಪ್ ಕೊಡಿ ಎಂದು ಹೇಳಿಲ್ಲ . ಅದನ್ನು ತಪ್ಪಾಗಿ ಅರ್ಥೈಸಲಾಗಿದೆ ಯಾವನು ಏನಾದರೂ ದಾಖಲೆ ಬಿಡುಗಡೆ ಮಾಡಲಿ ಎಂದು ಅಕ್ರೋಶಗೊಂಡರು.
ಕೋಟ್...
ರಾಜ್ಯಾದ್ಯಂತ ವಕ್ಫ್ ಕಾಯ್ದೆ ವಿರೋಧಿಸಿ ಬಿಜೆಪಿ ಹಾಗೂ ರೈತರು ಪ್ರತಿಭಟನೆ ನಡೆಸಿದ ಕೂಡಲೇ ಸರ್ಕಾರ ಎಚ್ಚೇತ್ತುಕೊಂಡಿದೆ. ಸಿಎಂ ಸಿದ್ದರಾಮಯ್ಯ ವಕ್ಫ್ ಸಂಸ್ಥೆಗೆ ನೋಟಿಸ್ ಹಿಂಪಡೆಯಿರಿ ಎಂಬುದು ತಾತ್ಕಲಿಕ ಆದೇಶ ಹೊರಡಿಸಿದ್ದಾರೆ. ವಕ್ಫ್ ಸಂಸ್ಥೆ ಆಸ್ತಿ ನೊಂದಾಣಿ ಬಿಡಬೇಕಾದರೆ ಶಾಶ್ವತ ಆದೇಶ ಹೊರಡಿಸಿ ವಕ್ಫ್ ಕಾಯ್ದೆ ತಿದ್ದುಪಡಿ ಮಾಡಿ.
- ಗೋವಿಂದ ಕಾರಜೋಳ, ಸಂಸದ.