ಬಳ್ಳಾರಿ : ನೆರೆಯ ಆಂಧ್ರಪ್ರದೇಶದ ಉರವಕೊಂಡ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹರಿದು 50 ಕ್ಕೂ ಅಧಿಕ ಕುರಿಗಳು ಸಾವನ್ನು ಅಪ್ಪಿರುವ ಘಟನೆ ಭಾನುವಾರ ನಡೆದಿದೆ.
ತಾಲೂಕಿನ ಶಿಡಿಗಿನಮೊಳೆ ಗ್ರಾಮದ ನಾಗರಾಜ , ಬಚ್ಚಲಪ್ಪ, ಮಂಜುನಾಥ, ನಾಗೇಂದ್ರ, ರಮೇಶ್, ನಟರಾಜ ಅವರಿಗೆ ಸೇರಿದ ಕುರಿಗಳು ಎಂಬುದು ತಿಳಿದು ಬಂದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಕುರಿಗಳ ಮೇಲೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಹರಿದು ಕುರಿಗಳು ಮೃತಪಟ್ಟಿವೆ. ಲಾರಿ ಹಾಗೂ ಚಾಲಕನನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ.