ಬೆಳಗಾವಿಯಲ್ಲಿ ಜಾಕ್ವಾರ್ ಶೋರೂಂ ಆರಂಭ

10Manju8
ಬೆಳಗಾವಿ ನಗರದ ಟಿಕಳವಾಡಿಯಲ್ಲಿ ಗುರುವಾರ ಜಾಕ್ವಾರ್ ಸಮೂಹದ ಬೃಹತ್ ಶೋರೂಂಅನ್ನು ದೀಪಕ ಗುಂಜಗೇಕರ್, ಎಂ.ಟಿ.ಹೆಗಡೆ, ವಿಜಯಕುಮಾರ ಹೆಡಾ, ಯಾಸೀನ್ ಮೊಹ್ಮದ್ ಉದ್ಘಾಟಿಸಿದರು. ಶರದ ಹೆಡಾ ಇತರರಿದ್ದರು.
Published on

ಬೆಳಗಾವಿ: ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಬೆಳಗಾವಿ ಮಹಾನಗರದಲ್ಲಿ ಜಾಕ್ವಾರ್ ಸಮೂಹದ ಬೃಹತ್ ಶೋರೂಂ ಆರಂಭಗೊಂಡಿದ್ದು, ಈ ಭಾಗದ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಜಾಕ್ವಾರ್ ಸಮೂಹದ ರಾಜ್ಯ ವಿಭಾಗದ ಮುಖ್ಯಸ್ಥ ಯಾಸೀನ್ ಮೊಹ್ಮದ್ ತಿಳಿಸಿದರು.

ನಗರದ ಟಿಳಕವಾಡಿಯಲ್ಲಿ ಗುರುವಾರ ಹೆಡಾ ಸೆರಾಮಿಕ್ಸ್ ಕಟ್ಟಡದಲ್ಲಿ ಹಮ್ಮಿಕೊಂಡಿದ್ದ ಜಾಕ್ವಾರ್ ಸಮೂಹದ ಬೃಹತ್ ಶೋರೂಂ ಉದ್ಘಾಟಿಸಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಮೊದಲ ಬಾರಿಗೆ ಜಾಕ್ವಾರ್ ಶೋರೂಂ ಆರಂಭವಾಗುತ್ತಿರುವುದರಿಂದ ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. ಅಲ್ಲದೆ, ಗ್ರಾಹಕರು ತಮಗೆ ಇಷ್ಟವಾದ ಉತ್ಪನ್ನಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದರು.

ಗ್ರಾಹಕರ ಅಭಿರುಚಿ, ಕಾಲಕ್ಕೆ ತಕ್ಕಂತೆ ಜಾಕ್ವಾರ್ ಸಮೂಹ ತನ್ನ ಉತ್ಪನ್ನಗಳು ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. 66 ದೇಶಗಳಿಗೆ ವಿಸ್ತರಣೆ ಮಾಡಿಕೊಂಡಿದೆ. ಇಂದು ಜಾಕ್ವಾರ್ ಗ್ರಾಹಕರ ಸ್ನೇಹಿಯಾಗಿ ಬೆಳೆದು ನಿಂತಿದೆ. ಶ್ರೀಮಂತರಿಂದ ಸಾಮಾನ್ಯ ವ್ಯಕ್ತಿಯ ಅಭಿರುಚಿ ಹಾಗೂ ಕೈಗೆಟುಕುವ ದರದಲ್ಲಿ ಜಾಕ್ವಾರ್ ಉತ್ಪನ್ನಗಳು ಲಭ್ಯವಿವೆ. ತನ್ನ ಗುಣಮಟ್ಟದ ಮೂಲಕವೇ ದೇಶ-ವಿದೇಶಗಳ ಮಾರುಕಟ್ಟೆಗಳಲ್ಲಿ ಖ್ಯಾತಿಗಳಿಸಿರುವ ಜಾಕ್ವಾರ್ ಉತ್ಪನ್ನಗಳ ಬೇಡಿಕೆ ವರ್ಷದಿಂದ ವರ್ಷಕ್ಕೆ ವಿಸ್ತರಣೆಯಾಗುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

ಕ್ರೇಡೈ ಬೆಳಗಾವಿ ಅಧ್ಯಕ್ಷ ದೀಪಕ ಗುಂಜಗೇಕರ್, ಎಂ.ಟಿ.ಹೆಗಡೆ, ಜಾಕ್ವಾರ್ ಶೋರೂಂ ಮುಖ್ಯಸ್ಥ ವಿಜಯಕುಮಾರ ಹೆಡಾ,
ಶರದ ಹೆಡಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net