ಬಸಾಪುರದಲ್ಲಿ ದುರ್ಗಾಮಾತಾ ದೌಡ್

web2
ಬಸಾಪುರ ಗ್ರಾಮದಲ್ಲಿ ದುರ್ಗಾಮಾತಾ ದೌಡ್ ಜರುಗಿತು. ಜಗದೀಶ ಪೂಜೇರಿ, ಚಂದ್ರಶೇಖರ ಚಚಡಿ, ರಾಮನಗೌಡ ಪಾಟೀಲ ಇತರರು ಇದ್ದರು.
Published on

ಬೆಳಗಾವಿ: ಶರನ್ನವರಾತ್ರಿ ಅಂಗವಾಗಿ ತಾಲೂಕಿನ ಬಸಾಪುರ ಗ್ರಾಮದಲ್ಲಿ ಗುರುವಾರ ದುರ್ಗಾಮಾತಾ ದೌಡ್ ಸಂಭ್ರಮದಿಂದ ಜರುಗಿತು. ಶ್ವೇತ ವಸ್ತ್ರ, ಕೇಸರಿ ಶಲ್ಯ ಧರಿಸಿದ್ದ ನೂರಾರು ಜನ ಭಕ್ತಿಯಿಂದ ದೌಡ್‌ನಲ್ಲಿ ಪಾಲ್ಗೊಂಡು ಮೆರುಗು ತಂದರು.

ದುರ್ಗಾದೇವಿ ದೇವಸ್ಥಾನದಿಂದ ಪ್ರಾರಂಭಗೊಂಡ ದುರ್ಗಾಮಾತಾ ದೌಡ್, ಊರಿನ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ಮಾಡುವ ಮೂಲಕ ಗ್ರಾಮದ ಎಲ್ಲ ದೇವಾಲಯಗಳಲ್ಲಿ ಜ್ಯೋತಿ ಬೆಳಗಿ, ದುರ್ಗಾದೇವಿ ದೇವಸ್ಥಾನದಲ್ಲಿ ಮಂಗಳಾರತಿಯೊಂದಿಗೆ ಸಂಪನ್ನಗೊಂಡಿತು.

ನಿವೃತ್ತ ಯೋಧ ಜಗದೀಶ ಪೂಜೇರಿ, ಗ್ರಾಪಂ ಸದಸ್ಯ ಚಂದ್ರಶೇಖರ ಚಚಡಿ, ರಾಮನಗೌಡ ಪಾಟೀಲ, ಮನೋಜ ಬಾಗೇವಾಡಿ, ಮಂಜುನಾಥ ಶಿವರುದ್ರನವರ, ಪ್ರವೀಣ ಪೂಜೇರಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net