ಬಾಗಳಿ ಗ್ರಾಮದಲ್ಲಿ ಪರುವು ಕಾರ್ಯಕ್ರಮ

HRP Paruvu
ಬಾಗಳಿ ಗ್ರಾಮದ ಶ್ರೀ ಕಲ್ಲೇಶ್ವರ ದೇವಸ್ಥಾನದಲ್ಲಿ ಪರುವು ಕಾರ್ಯಕ್ರಮ ಪ್ರಯುಕ್ತ ಅನ್ನಸಂತರ್ಪಣೆ ನಡೆಯಿತು.
Published on

ಹರಪನಹಳ್ಳಿ: ತಾಲೂಕಿನ ಬಾಗಳಿ ಗ್ರಾಮದ ಆರಾಧ್ಯ ದೈವ ಶ್ರೀ ಕಲ್ಲೇಶ್ವರ ದೇವಸ್ಥಾನದಲ್ಲಿ ಸೋಮವಾರ ಪರುವು ಕಾರ್ಯಕ್ರಮ ಜರುಗಿತು.

ಹನ್ನೊಂದನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಶ್ರೀ ಕಲ್ಲೇಶ್ವರ ದೇವಸ್ಥಾನದಲ್ಲಿ ಗ್ರಾಮಸ್ಥರು ಮುಂಗಾರು ಬಿತ್ತನೆ ಕಾರ್ಯಕ್ಕೂ ಮೊದಲು ಪ್ರತಿ ವರ್ಷದಂತೆ ಪರುವು ಜರುಗಿಸುವುದು ಸಂಪ್ರದಾಯ.

ಕಳೆದ ವರ್ಷ ಬರದಿಂದ ಕಂಗೆಟ್ಟಿರುವ ರೈತರ ಮೊಗದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮಂದಹಾಸ ಮೂಡಿದೆ. ಹೀಗಾಗಿ ಮುಂಗಾರು ಆಶಾದಾಯಕವಾಗಿದ್ದು, ಗ್ರಾಮಸ್ಥರು ಸೋಮವಾರ ಶ್ರೀ ಕಲ್ಲೇಶ್ವರ ಸ್ವಾಮಿಗೆ ವಿಷೇಶ ಪೂಜೆ ಸಲ್ಲಿಸಿದರು. ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net