ಫ್ಯಾಬ್-12 ಜಿಪಿಎಲ್ ಚಾಂಪಿಯನ್

fab 12
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ನಗರದ ಜಿಮ್ಾನಾ ಕ್ಲಬ್​ನಲ್ಲಿ ನಡೆದ 10ನೇ ಆವೃತ್ತಿಯ ಜಿಮ್ಾನಾ ಪ್ರೀಮಿಯರ್ ಲೀಗ್ (ಜಿಪಿಎಲ್) ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚೇತನ ಯಾದವ ನಾಯಕತ್ವದ ಫ್ಯಾಬ್-12 ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಫೈನಲ್​ನಲ್ಲಿ ಟಾಪ್ ಸೀಡ್ ತಂಡದ ವಿರುದ್ಧ 4-3 ಆಟಗಳಿಂದ ಗೆಲುವು ಸಾಧಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ಪಂದ್ಯಾವಳಿಯ ಅತ್ಯುತ್ತಮ ಆಟಗಾರರಾಗಿ ಎ1 ವಿಭಾಗದಲ್ಲಿ ಶಿಯಾಬ್, ಎ ವಿಭಾಗದಲ್ಲಿ ರವಿ ಬೆಂತೂರು, ಬಿ1 ವಿಭಾಗದಲ್ಲಿ ಮನೀಷಾ ಠಕ್ಕರ್, ಬಿ2 ವಿಭಾಗದಲ್ಲಿ ಅಮಿತ್ ಬೇತಾಳ, ಬಿ3 ವಿಭಾಗದಲ್ಲಿ ಡಾ. ಹರ್ಷಾ ಯಾಲಗಿ ಪ್ರಶಸ್ತಿ ಪಡೆದುಕೊಂಡರು.

ಬಡ ಉದಯೋನ್ಮುಖ ಕ್ರಿಕೆಟ್ ಆಟಗಾರ್ತಿ ರಿಮ್​ವå್ ಶುಕ್ಲಾ ಮತ್ತು ಮಾಧವ ಧಾರವಾಡಕರ್ ಇವರಿಗೆ ಪ್ರೋತ್ಸಾಹ ಧನ ನೀಡಿ ಸತ್ಕರಿಸಲಾಯಿತು. ಉದ್ಯಮಿ ವಿ.ಎಸ್.ವಿ. ಪ್ರಸಾದ ವಿಜೇತರಿಗೆ ಬಹುಮಾನ ವಿತರಿಸಿದರು. ಜಿಮ್ಾನಾ ಕ್ಲಬ್​ನ ಅಧ್ಯಕ್ಷ ವಿನಾಯಕ ಆಕಳವಾಡಿ, ವಿಷ್ಣು ಮೆಹರವಾಡೆ, ವೀರಣ್ಣ ಸವಡಿ ಮತ್ತು ಅಂಜನಾ ಬಸವಗೌಡರ ಉಪಸ್ಥಿತರಿದ್ದರು.

ಜಿಪಿಎಲ್ ಸಂಯೋಜಕ ಬಸವರಾಜ ಉಳ್ಳಾಗಡ್ಡಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದಯ ಬಾಡಕರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net