ಅವನಿ ಪುಣ್ಯಕ್ಷೇತ್ರದಲ್ಲಿ ಶಿವರಾತ್ರಿ ಸಂಭ್ರಮ

00
Published on

ಸಾಕ್ಷಾತ್ ಶ್ರೀರಾಮಚಂದ್ರನಿಂದಲೇ ಲಿಂಗ ಪ್ರತಿಷ್ಠಾಪನೆ

ಅಪ್ಪಾಜಿಗೌಡ ಮುಳಬಾಗಿಲು

ನಗರದಿಂದ ಸುಮಾರು 11 ಕಿ.ಮೀ. ಅಂತರದಲ್ಲಿರುವ ಅವನಿಯು ಪುರಾಣಪ್ರಸಿದ್ಧ ಪುಣ್ಯಕ್ಷೇತ್ರವಾಗಿದ್ದು, ಇಲ್ಲಿನ ಪರಿಸರ, ಅನೇಕ ದೇವಾಲಯಗಳು ಮತ್ತು ಶಿಲಾ ಶಾಸನಗಳು ಶ್ರೀಕ್ಷೇತ್ರದ ಪ್ರಾಚೀನ ಪ್ರಾಮುಖ್ಯ ಸಾರುತ್ತವೆ. ಊರಿನ ಪೂರ್ವದ ಹೆಸರು ಅಹವನೀಯ, ಆವಣ್ಯ, ಆವಣೆ, ಅವನಿ ಎಂಬ ಹೆಸರುಗಳು ಶಾಸನಗಳಿಂದ ತಿಳಿದುಬಂದಿದ್ದು, ಈಗ ಅವಂತಿಕಾ ಕ್ಷೇತ್ರ ಎಂಬ ಅವನಿಯಾಗಿದೆ.

ಗ್ರಾಮದಲ್ಲಿ ಸಾಕ್ಷಾತ್ ಶ್ರೀರಾಮಚಂದ್ರನಿಂದಲೇ ಶ್ರೀರಾಮಲಿಂಗೇಶ್ವರ ಸ್ವಾಮಿಯನ್ನು ಪ್ರತಿಷ್ಠಾಪಿಸಿದ್ದು, ಭವ್ಯ ಶಿವಲಿಂಗಕ್ಕೆ ನಿತ್ಯ ಪೂಜೆ ಜತೆಗೆ ಶಿವರಾತ್ರಿಯಂದು ವಿಶೇಷ ಪೂಜಾದಿಗಳು ನೆರವೇರುತ್ತವೆ. ಶಿವರಾತ್ರಿ ಅವಾವಸ್ಯೆ ದಿನ ಶ್ರೀಕಾವಾಕ್ಷಿದೇವಿ ಸಮೇತ ಪ್ರಸನ್ನ ಶ್ರೀರಾಮಲಿಂಗೇಶ್ವರ ದೇವರ ಬ್ರ್ರಹ್ಮರಥೋತ್ಸವ ನೆರವೇರುವುದು ವಿಶೇಷ.

ಸುತ್ತಮುತ್ತಲ ಪ್ರದೇಶ ಪುರಾಣಪ್ರಸಿದ್ಧವಾದ ಅವಂತಿಕಾ ಕ್ಷೇತ್ರದ ಬೆಟ್ಟದ ಮೇಲೆ ಶ್ರೀಸೀತಾಪಾರ್ವತಿ ದೇವಾಲಯ ಇದ್ದು, ಬೆಟ್ಟದ ಮಧ್ಯೆ ವಾಲ್ಮೀಕಿ ಋಷಿಯ ಆಶ್ರಮವಿದೆ. ಬೆಟ್ಟದ ತಪ್ಪಿಲಿನಲ್ಲಿ ಶ್ರೀ ಆದಿ ಜಾಂಭವಂತ ದೇವಾಲಯ ಇದ್ದು, ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಮೊದಲು ಪ್ರಥಮ ಪೂಜೆ ಈ ಎರಡು ಸ್ಥಳಗಳಲ್ಲಿ ಆರಂಭಗೊಳ್ಳುವುದು ವಾಡಿಕೆ.

ಲವಕುಶರಿಗೆ ಇಲ್ಲೇ ಜನ್ಮ: ಸೀತಾದೇವಿ ವನವಾಸವಿದ್ದಾಗ ಇದೇ ಸ್ಥಳದಲ್ಲಿ ತಂಗಿದ್ದು, ಮಕ್ಕಳಾದ ಲವಕುಶರಿಗೆ ಜನ್ಮವಿತ್ತಳೆಂದೂ ಲವಕುಶರು ರಾವಾಶ್ವಮೇಧ ಕುದುರೆಯನ್ನು ಕಟ್ಟಿದ ಹಾಗೂ ರಾಮಲಕ್ಷ್ಮಣರೊಡನೆ ಇಲ್ಲಿಯೇ ಯುದ್ಧವಾಡಿದ ಮತ್ತು ತಾವು ಪ್ರಯೋಗ ವಾಡಿದ ಬಾಣಗಳ ಪ್ರತೀಕಗಳು ಬೆಟ್ಟದ ಮೇಲೆ ಅನೇಕ ಸ್ಥಳಗಳಲ್ಲಿ ಇಂದಿಗೂ ಕಾಣಬಹುದಾಗಿದೆ.

ವನವಾಸದ ಚಿತ್ರಣ: ಬೆಟ್ಟದ ಮೇಲೆ ಸೀತಾವಾತೆಯು ಪಾರ್ವತಿದೇವಿಯನ್ನು ಪೂಜಿಸಿದ ಸ್ಥಳದಲ್ಲೇ ಪಾರ್ವತಿದೇವಿಯ ದೇವಾಲಯ ಇದ್ದು, ರಾಮಲಕ್ಷಣರು ಬಿಟ್ಟ ಬಾಣಗಳು ದೊಡ್ಡದಾಗಿರುವ ಬಂಡೆಯನ್ನು ಕೊರೆದು ಪವಿತ್ರ ಪುಣ್ಯತೀರ್ಥವಾಗಿದೆ. ಈ ಸುತ್ತಿನ ಅನೇಕ ತಾಣಗಳು ವಾಲ್ಮೀಕಿಯ ಕುಟೀರ, ಲವಕುಶರ ತೊಟ್ಟಿಲು, ಸೀತೆಯ ಅಡುಗೆಪಾತ್ರೆ, ಬಟ್ಟೆಯೊಗೆಯುತ್ತಿದ್ದ ಕೊಳ, ಲವಕುಶರು ಯಜ್ಞಾಶ್ವವನ್ನು ಕಟ್ಟಿದ ಬಂಡೆ, ರಾಮಲಕ್ಷ್ಮಣರು ಕುಳಿತಿದ್ದ ಬಂಡೆ, ಶ್ರೀರಾಮ ಲಂಕೆಯನ್ನು ಗೆದ್ದು ಅಯೋಧ್ಯೆಗೆ ಹಿಂತಿರುಗುವ ಹಾದಿಯಲ್ಲಿ ಇಲ್ಲಿಗೆ ಬಂದಿದ್ದು, ಯುದ್ಧ ಪಯಾಂಥವಾಗಿ ಶ್ರೀರಾಮಲಿಂಗೇಶ್ವರ, ಶ್ರೀಲಕ್ಷ್ಮಣೇಶ್ವರ, ಭರತೇಶ್ವರ, ಅಂಜನೇಶ್ವರ, ಸುಗ್ರಿವೇಶ್ವರ, ಅಂಗದೇಶ್ವರ, ದೇವಾಲಯಗಳಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿರುವುದು ಕ್ಷೇತ್ರದ ಮಹಿಮೆಯನ್ನು ಒತ್ತು ಹೇಳುತ್ತದೆ.

ಅಮವಾಸ್ಯೆಯಂದು ಭ್ರಹ್ಮ ರಥೋತ್ಸವಪ್ರತಿ ಶಿವರಾತ್ರಿ ಹಬ್ಬದಂದು ಕ್ಷೇತ್ರದಲ್ಲಿ ಬ್ರಹ್ಮರಥೋತ್ಸವ ನಡೆಯಲಿದ್ದು, 10 ದಿನಗಳ ಕಾಲ ಜಾನುವಾರು ಜಾತ್ರೆ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ರಥೋತ್ಸವ ದಿನ ಮುಳಬಾಗಿಲು, ಕೋಲಾರ, ಕೆಜಿಎ್ಗಳಿಂದ ಪ್ರತಿ 5 ನಿಮಿಷಕ್ಕೊಂದು ಜಾತ್ರೆವಿಶೇಷ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ವಾಡಲಾಗಿದ್ದು, ಒಂದು ಲಕ್ಷಕ್ಕೂ ಅಧಿಕ ಭಕ್ತರು ರಥೋತ್ಸವ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ರಾಮಲಿಂಗೇಶ್ವರ ದೇವಾಲಯಕ್ಕೆ ಮತ್ತು ಸೀತಾಪಾರ್ವತಿ ಬೆಟ್ಟದ ಮೇಲಿರುವ ಪಾರ್ವತಿ ದೇವಾಲಯಕ್ಕೆ ಚಾರಣ ತೆರಳಿ ಪೂಜೆ ಸಲ್ಲಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net