ಅರಟಾಳದಲ್ಲಿ ಮೊಹರಂ ಆಚರಣೆ

1
ಅರಟಾಳ ಗ್ರಾಮದಲ್ಲಿ ಬುಧವಾರ ಮೊಹರಂ ಹಬ್ಬ ಸಡಗರದಿಂದ ಆಚರಿಸಲಾಯಿತು.
Published on

ಅರಟಾಳ: ಗ್ರಾಮದಲ್ಲಿ ಬುಧವಾರ ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಲಾ ತಂಡಗಳು ಪಂಜಾ ದೇವರ ಎದುರು ಹಲಗೆ ಬಾರಿಸುತ್ತ ಕುಣಿದವು. ಕರಬಲ್ ಕುಣಿತ ಜರುಗಿತು. ಭಕ್ತರು ಚುರಮುರಿ, ಖಾರಿಕ್ ಅರ್ಪಿಸಿ ಹರಕೆ ತೀರಿಸಿದರು.

ಅಗ್ನಿ ಹೊಂಡದಲ್ಲಿ ಹಾಲು ಉಕ್ಕಿಸಿ ನುಡಿ ಹೇಳಲಾಯಿತು.

ಹಾಜಿಸಾಬ್ ನದಾಫ್, ಪ್ರಲ್ಹಾದ್ ದಮಡಿ, ಭೀಮಪ್ಪ ಮಾಳಿ, ಫಾರೂಕ್‌ಅಲಿ ಮುಲ್ಲಾ, ಗ್ರಾಪಂ ಸದಸ್ಯ ರಾಮಪ್ಪ ಪೂಜಾರಿ, ಮಾಳಪ್ಪ ಕಾಂಬಳೆ, ಈರಪ್ಪ ಪಾಟೀಲ, ದುಂಡನಗೌಡ ಪಾಟೀಲ, ಸುರೇಶ ಕಾಂಬಳೆ, ಅಕ್ಬರ್‌ಅಲಿ ಮುಲ್ಲಾ, ಯಂಕಪ್ಪ ಜಂಬಗಿ, ಬಸಪ್ಪ ತೆಲಸಂಗ, ಲಕ್ಷ್ಮಣ ಹಿರೇಕುರುಬರ, ಶ್ರೀಶೈಲ ಪೂಜಾರಿ, ಅಸ್ಕರ್‌ಅಲಿ ಮುಲ್ಲಾ, ಮೀರಾಸಾಬ್ ಮುಲ್ಲಾ, ಪಾಂಡಪ್ಪ ಮಾದರ, ಸೈಯದ್‌ಸಾಬ್ ಮುಲ್ಲಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net