ಅಪಘಾತದಲ್ಲಿ ವ್ಯಕ್ತಿ ಸಾವು

Published on

ಹರಪನಹಳ್ಳಿ: ಬೈಕ್ ಡಿಕ್ಕಿ ಹೊಡೆದಿದ್ದರಿಂದ ವ್ಯಕ್ತಿಯೊಬ್ಬರು ಸೋಮವಾರ ಮೃತಟ್ಟಿದ್ದಾರೆ. ತಾಲೂಕಿನ ಗಡಿಗುಡಾಳು ಗ್ರಾಮದ ಜಗನ್ನಾಥಪ್ಪ (55) ಮೃತ. ಜಮೀನಿಗೆ ನೀರು ಕಟ್ಟಲೆಂದು ಸ್ನೇಹಿತ ಗೋಣೆಪ್ಪನೊಂದಿಗೆ ಹೋಗುವಾಗ ಈ ಘಟನೆ ಜರುಗಿದೆ.

ಬೈಕ್ ಚಾಲನ ಮಂಜುನಾಥಗೆ ಬಲವಾದ ಪೆಟ್ಟು ಬಿದ್ದಿದ್ದು ಅರಸೀಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅರಸೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net