ಅಪಘಾತದಲ್ಲಿ ಗಾಯಗೊಂಡಿದ್ದ ಗ್ರಾಪಂ ಸದಸ್ಯ ಸಾವು

Kampli Gp Member death
ಕುರಿ ಗಾದಿಲಿಂಗಪ್ಪ
Published on

ಕಂಪ್ಲಿ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ತಾಲೂಕಿನ ದೇವಲಾಪುರ ಗ್ರಾಮದ ಗ್ರಾಪಂ ಸದಸ್ಯ ಕುರಿ ಗಾದಿಲಿಂಗಪ್ಪ (59) ಚಿಕಿತ್ಸೆ ಫಲಿಸದೆ ಶನಿವಾರ ಅಸುನೀಗಿದ್ದಾರೆ.

ನ.6 ರಂದು ಸಂಜೆ ವಾಯು ವಿಹಾರಕ್ಕೆ ತೆರಳಿದ್ದಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿತ್ತು. ಬಳ್ಳಾರಿಯ ಬಿಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸಲಿಲ್ಲ.

ಕುಡತಿನಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರಿಗೆ ಪತ್ನಿ, ಪುತ್ರಿ, ಮೂವರು ಪುತ್ರರು ಇದ್ದಾರೆ. ಸ್ವಗ್ರಾಮದ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net