

ಚಿಕ್ಕೋಡಿ: ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಒಂದೇ ೇತ್ರಕ್ಕೆ ಮೀಸಲಿರದೆ, ತಂತ್ರಜ್ಞಾನ, ಆರ್ಥಿಕ, ರಾಜಕೀಯ, ರಕ್ಷಣೆ ಸೇರಿ ಪ್ರತಿ ೇತ್ರದಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ ಎಂದು ಪುರಸಭೆ ಅಧ್ಯೆ ವೀಣಾ ಜಗದೀಶ ಕವಟಗಿಮಠ ಹೇಳಿದರು.
ಇಲ್ಲಿನ ರವಳನಾಥ ಹೌಸಿಂಗ್ ಸಹಕಾರಿ ಸಂಸ್ಥೆಯ ಸಭಾಗೃಹದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಅರಿಶಿನ ಕುಂಕುಮ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರ ಕೊಡುಗೆ ಸ್ಮರಿಸಲು ಈ ದಿನ ಮೀಸಲಿರಿಸಲಾಗಿದೆ ಎಂದರು. ಮುಖ್ಯ ಅತಿಥಿಯಾಗಿ ಡಿಡಿಪಿಐ ಕಚೇರಿ ಡಿವೈಪಿಸಿ ರೇವತಿ ಮಠದ ಮಾತನಾಡಿ, ಪಾಲಕರು ಹೆಣ್ಣು ಮಕ್ಕಳಿಗೆ ಒಳ್ಳೆಯ ಸಂಸತಿ, ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.
ಸಹಕಾರಿಯ ಉಪಾಧ್ಯಕ್ಷೆ ಮೀನಾ ಬಸವರಾಜ ರಿಂಗಾನೆ ಹಾಗೂ ಸಂಸ್ಥಾಪಕ ಎಂ.ಎಲ್.ಚೌಗಲೆ ಮಾತನಾಡಿದರು. ಶೋಭಾ ಯಳವತ್ತಿಮಠ, ಸುನೀತಾ ಮಾಳಿ, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯೆ ಶಾಂಭವಿ ಅಶ್ವತ್ಥಪುರ, ಪ್ರಶಾಂತ ವರದಾಯಿ ಇದ್ದರು. ಚಿಕ್ಕೋಡಿ ಶಾಖೆಯ ಸಲಹೆಗಾರ ಜಯಶ್ರೀ ನಾಗರಳ್ಳಿ ಸ್ವಾಗತಿಸಿದರು. ಶ್ರುತಿ ಅರಬೋಲೆ ನಿರೂಪಿಸಿದರು. ಕವಿತಾ ಧರಿಗೌಡರ ವಂದಿಸಿದರು.