

ಕುಕನೂರು: ರಾಜ್ಯವು 1956 ರಲ್ಲಿ ರಚನೆಯಾಗಿದ್ದು, 1973 ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಕರ್ನಾಟಕ ಎಂಬ ಹೆಸರು ಅಧಿಕೃತವಾಗಿ ಘೋಷಿಸಿದರು ಎಂದು ಉಪನ್ಯಾಸಕ ಚಂದ್ರಶೇಖರ್ ಅಂಗಡಿ ಹೇಳಿದರು.
ಸಮೀಪದ ಮಂಡಳಗೇರಿ ಶ್ರೀ ಜಗದ್ಗುರು ತೋಂಟದಾರ್ಯ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಕರ್ನಾಟಕ ರಾಜ್ಯೋತ್ಸವ ಸುವರ್ಣ ಮಹೋತ್ಸವ ನಿಮಿತ್ತ ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬುಧವಾರ ಮಾತನಾಡಿದರು.
ರಾಜ್ಯವು ಶಿಕ್ಷಣ, ಕೈಗಾರಿಕಾ, ಕೃಷಿ, ಸಾಹಿತ್ಯ ಕೇತ್ರಗಳಲ್ಲಿ ಸಾಧನೆ ಮಾಡಿದ್ದು, ಹೆಮ್ಮೆ ಎನಿಸುತ್ತದೆ. ಆದ್ದರಿಂದ ನಾವೆಲ್ಲರೂ ಈ ಸುವರ್ಣ ಮಹೋತ್ಸವವನ್ನು ಹಬ್ಬದ ರೀತಿಯಲ್ಲಿ ಅದ್ದೂರಿಯಾಗಿ ಆಚರಿಸುತ್ತಿದ್ದೇವೆ ಎಂದರು. ಕಾಲೇಜಿನ ಸಿಬ್ಬಂದಿಗಳಾದ ಕೆ. ಆರ್. ಕೋರಿ. ಲಕ್ಷ್ಮಣ ಮಡಿವಾಲರ, ಸಂಗಯ್ಯ ಸಾರಂಗಮಠ, ಮುತ್ತಪ್ಪ ಛಲವಾದಿ, ರುದ್ರಯ್ಯ ಕಂತಿ ಇದ್ದರು .
ಇದನ್ನೂ ಓದಿ: ಕರ್ನಾಟಕ ರಾಜ್ಯೋತ್ಸವ ವಿಶೇಷವಾಗಿ ಆಚರಿಸಿ