ರಾಜ್ಯದ ಎಲ್ಲ ಕಾಲೇಜುಗಳಲ್ಲಿರಲಿ ಶಿಕ್ಷಣಶಾಸ್ತ್ರ

kottur education
ಕೊಟ್ಟೂರಿನಲ್ಲಿ ಶುಕ್ರವಾರ ರಾಜ್ಯ ಮಟ್ಟದ ಪಿಯು ಕಾಲೇಜುಗಳ ಶಿಕ್ಷಣ ಶಾಸ್ತ್ರ ವಿಷಯದ ಶೈಕ್ಷಣಿಕ ಸಮ್ಮೇಳನ ಹಾಗೂ ಕಾರ್ಯಾಗಾರವನ್ನು ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಟಿ.ಪಾಲಾಕ್ಷ ಉದ್ಘಾಟಿಸಿದರು. ಪ್ರಮುಖರಾದ ಬಿ.ಭರತ್ ಭೂಷಣ್, ಎಚ್.ಎನ್. ವೀರಭದ್ರಪ್ಪ. ಡಾ.ಪಿ.ಎಂ. ವಾಗೀಶಯ್ಯ, ನಾಗರಾಜ್ ಹವಾಲ್ದಾರ್ ಇತರರಿದ್ದರು.
Published on

ಕೊಟ್ಟೂರು: ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಶಾಸ್ತ್ರ ವಿಷಯವನ್ನು ವಿದ್ಯಾರ್ಥಿಗಳು ಆಯ್ದುಕೊಳ್ಳಲು ಹಿಂದೇಟು ಹಾಕುತ್ತಿರುವುದು ಈ ವಿಷಯ ಬೋಧಕರಲ್ಲಿ ಆತಂಕ ತರುವ ಸಂಗತಿ ಎಂದು ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಟಿ.ಪಾಲಾಕ್ಷ ಹೇಳಿದರು.

ಪಟ್ಟಣದ ಇಂದು ಪಪೂ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ 14ನೇ ರಾಜ್ಯಮಟ್ಟದ ಪಪೂ ಕಾಲೇಜಗಳ ಶಿಕ್ಷಣ ಶಾಸ್ತ್ರ ವಿಷಯ ಉಪನ್ಯಾಸಕರ ಶೈಕ್ಷಣಿಕ ಸಮ್ಮೇಳನ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಶಾಸ್ತ್ರ ವಿದ್ಯಾರ್ಥಿಗಳಲ್ಲಿ ಜ್ಞಾನದ ಅರಿವು ಮೂಡಿಸುವ ಅಧ್ಯಾಯಗಳನ್ನು ಹೊಂದಿದೆ. ಆದರೆ, ಈ ವಿಷಯ ಕರಾವಳಿ, ಮಲೆನಾಡು, ಮೈಸೂರು, ಬೆಂಗಳೂರು ಭಾಗದ ಬಹುತೇಕ ಪಿಯು ಕಾಲೇಜುಗಳಲ್ಲಿ ಅಪರೂಪವಾಗಿದೆ. ಕೇವಲ ಉತ್ತರ ಕರ್ನಾಟಕ ಭಾಗದ ಪಿಯು ಕಾಲೇಜುಗಳಿಗೆ ಸೀಮಿತವಾಗಿರದೆ ರಾಜ್ಯದ ಎಲ್ಲ ಕಾಲೇಜುಗಳಲ್ಲಿ ಇರುವಂತಾಗಬೇಕು ಎಂದರು.

ಸಂಘದ ಗೌರವ ಸಲಹೆಗಾರ ಬಿ.ಭರತ್ ಭೂಷಣ್ ಮಾತನಾಡಿ, ಎಲ್ಲರಲ್ಲೂ ಜಾಗೃತಿ ಮೂಡಿಸವುದೇ ಶಿಕ್ಷಣ ಶಾಸ್ತ್ರ ಪರಿಕಲ್ಪನೆಯಾಗಿದೆ. 14 ವರ್ಷಗಳ ಕಾಲ ಶಿಕ್ಷಣ ಶಾಸ್ತ್ರ ವಿಷಯದ ಸಮ್ಮೇಳನ ನಡೆಯುತ್ತ ಬಂದಿರುವುದು ದಾಖಲೆಯಾಗಿದೆ ಎಂದು ತಿಳಿಸಿದರು.

ಪಿಯು ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ನಾಗರಾಜ್ ಹವಾಲ್ದಾರ್ ಮಾತನಾಡಿ, ಪಟ್ಟಣದಲ್ಲಿ ಆಗುತ್ತಿರುವ ಅಕ್ಷರ ಕ್ರಾಂತಿಯಿಂದ ಕೊಟ್ಟೂರು ಶೈಕ್ಷಣಿಕ ಜಿಲ್ಲೆಯಾಗುವ ದಿಕ್ಸೂಚಿಯಾಗಿದೆ ಎಂದರು.

ಇಂದು ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಎಚ್.ಎನ್.ವೀರಭದ್ರಪ್ಪ, ರಾಜ್ಯ ಪಪೂ ಕಾಲೇಜುಗಳ ಶಿಕ್ಷಣ ಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಕೊಟ್ರೇಶ ಮಾತನಾಡಿದರು. ವಿಎಸ್‌ಕೆ ವಿವಿ ಸಿಂಡಿಕೇಟ್ ಸದಸ್ಯ ಡಾ.ಪಿ.ಎಂ. ವಾಗೀಶಯ್ಯ, ಪ್ರಮುಖರಾದ ಆರ್.ಬಿ. ಸುಂಕದಾಳ, ಶ್ರೀಶೈಲ, ಡಾ.ರಾಜಣ್ಣ, ಎಸ್.ಬಿ.ಪಾಟೀಲ್, ನಿರುಪಮ ನಾಯಕ, ವಿಜಿ ಹೂನಳ್ಳಿ, ಪ್ರವೀಣಕುಮಾರ್, ಕಾಲೇಜು ಉಪ ಪ್ರಾಚಾರ್ಯರಾದ ಎಚ್.ಮಹೇಶ, ಕೆ.ಬಿ.ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net