ಕೆಲವೇ ಗಂಟೆಗಳಲ್ಲಿ ಸಿಕ್ಕಿತು ಚಿನ್ನಾಭರಣ…!

In a few hours, I got gold jewelry...!
ಆಟೋದಲ್ಲಿ ಚಿನ್ನಾಭರಣ ಬಿಟ್ಟ ಬ್ಯಾಂಗನ್ನು ಸುರಕ್ಷಿತವಾಗಿ ಕಾಯ್ದಿರಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ರಫೀಕ್​ ಸಿರಾಜ್​ ಗೆಣ್ಣೂರ್​ ಅವರನ್ನು ಸನ್ಮಾನಿಸಲಾಯಿತು. ಸಂಗೀತಾ ರವೀಂದ್ರ ಯರನಾಳ, ಸಿಪಿಐ ಮಹಾಂತೇಶ ದ್ಯಾಮಣ್ಣವರ, ಅನಿಲ್​ ದೊಡ್ಡಮನಿ, ರಾಜು ನಾಯಕ, ರಾಮನಗೌಡ ಬಿರಾದಾರ ಇತರರಿದ್ದಾರೆ.
Published on

ವಿಜಯಪುರ : ಖಾಕಿ ಪಡೆಯ ಮಿಂಚಿನ ಕಾರ್ಯಾಚರಣೆ ಫಲವಾಗಿ ಮಿಸ್​ ಆಗಿದ್ದ ಬೆಲೆ ಬಾಳುವ ಚಿನ್ನಾಭರಣ ಕೆಲವೇ ಗಂಟೆಗಳಲ್ಲಿ ವಾರಸುದಾರರ ಕೈ ಸೇರಿದೆ.

ವಿಜಯಪುರದ ರೈಲ್ವೆ ನಿಲ್ದಾಣದಿಂದ ಆಟೋ ಹತ್ತಿ ಬಸ್​ ನಿಲ್ದಾಣಕ್ಕೆ ಬಂದಿಳಿದಿದ್ದ ದಂಪತಿ ಚಿನ್ನ ಹಾಗೂ ಬೆಳ್ಳಿ ಆಭರಣ ಇರುವ ಬ್ಯಾಗನ್ನು ಆಟೋದಲ್ಲಿಯೇ ಬಿಟ್ಟು ಹೋಗಿದ್ದರು. ಬಳಿಕ ಅರಿವಾಗಿ ಕಣ್ಣೀರು ಸುರಿಸಿದ್ದರು. ಆದರೆ, ಸಿಪಿಐ ಮಹಾಂತೇಶ ದ್ಯಾಮಣ್ಣವರ ನೇತೃತ್ವದ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ, ಚಿನ್ನಾಭರಣ ಪತ್ತೆ ಹಚ್ಚಿ ದಂಪತಿಗೆ ಹಿಂತಿರುಗಿಸಿದ್ದು, ಆ ದಂಪತಿ ತುಂಬು ಹೃದಯದಿಂದ ಕೃತತೆ ಸಲ್ಲಿಸಿದ್ದಾರೆ.

ಟನೆ ವಿವರ: ಜೈನಾಪುರ ಗ್ರಾಮದ ಸಂಗೀತಾ ರವೀಂದ್ರ ಯರನಾಳ ಎಂಬುವವರೇ ಚಿನ್ನಾಭರಣದ ವಾರಸುದಾರರು. ಗುರುವಾರ ರೈಲ್ವೆ ನಿಲ್ದಾಣದಿಂದ ಆಟೋದಲ್ಲಿ ಬರಬೇಕಾದರೆ ಬಸ್​ ನಿಲ್ದಾಣದಲ್ಲಿ ಇಳಿಯುವಾಗ ಬ್ಯಾಗ್​ ಆಟೋದಲ್ಲಿಯೇ ಬಿಟ್ಟಿದ್ದಾರೆ. ಬಳಿಕ ಆಟೋ ಚಾಲಕ ಮನೆಗೆ ಹೋಗಿದ್ದಾನೆ.

ಗಾಂಧಿ ಚೌಕ್​ ಠಾಣೆಗೆ ಬಂದು ಅಳಲು ತೋಡಿಕೊಂಡ ದಂಪತಿ ಸ್ಥಿತಿಗೆ ಮರುಗಿದ ಪೊಲೀಸರು ಸಿಸಿ ಟಿವಿ ದೃಶ್ಯಾವಳಿ ಆಧರಿಸಿ, ಆಟೋ ನಂಬರ್​ ಪಡೆದು, ಅದರ ವಿವರ ಕಲೆ ಹಾಕಿ, ಆಟೋ ಚಾಲಕ ಮನೆಗೆ ಹೋಗಿ ಬ್ಯಾಗ್​ ಪಡೆದಿದ್ದಾರೆ.

ಆಟೋ ಚಾಲಕ ರಫೀಕ್​ ಸಿರಾಜ್​ ಗೆಣ್ಣೂರ್​ ಯಥಾವತ್ತಾಗಿ ಆ ಬ್ಯಾಗ್​ ಕಾಯ್ದಿರಿಸಿ ಪ್ರಾಮಾಣಿಕತೆ ಮೆರೆದಿದ್ದಾನೆ. ಹೀಗಾಗಿ ಚಿನ್ನಾಭರಣ ದಂಪತಿಗೆ ಒಪ್ಪಿಸುವ ಸಂದರ್ಭದಲ್ಲಿಯೇ ಆಟೋ ಚಾಲಕನನ್ನು ಪೊಲೀಸರು ಸನ್ಮಾನಿಸಿದ್ದಾರೆ.

ಅಪರಾಧ ವಿಭಾಗದ ಸಿಬ್ಬಂದಿಗಳಾದ ಅನಿಲ್​ ದೊಡ್ಡಮನಿ, ರಾಜು ನಾಯಕ, ರಾಮನಗೌಡ ಬಿರಾದಾರ, ಬಾಬು ಗುಡಿಮಣಿ ಹಾಗೂ ಸಿದ್ದು ಬಿರಾದಾರ ಮತ್ತು ಸಿಸಿಟಿವಿ ಕಮಾಂಡ್​ ಸೆಂರ್ಟನ್​ ಸಿಬ್ಬಂದಿ ಗಿರೀಶ್​ ಬ್ಯಾಕೋಡ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net