ನಲ್ಲಿಯಲ್ಲಿ ಬರುತ್ತಿದೆ ರಾಡಿ ನೀರು!

4mnd1-----------
Published on

ಮುಂಡಗೋಡ: ಪಟ್ಟಣದ ಹೊಸ ಓಣಿ, ನಂದೀಶ್ವರನಗರ ಹಾಗೂ ಲಂಬಾಣಿ ತಾಂಡಾ ಭಾಗಗಳಿಗೆ ಸರಬರಾಜು ಮಾಡಿದ ಕುಡಿಯಲು ರಾಡಿ ಮಿಶ್ರಿತವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪಟ್ಟಣ ಪಂಚಾಯಿತಿಯವರು ಪಟ್ಟಣ ವ್ಯಾಪ್ತಿಯಲ್ಲಿನ ಸಾರ್ವಜನಿಕರಿಗೆ ಸನವಳ್ಳಿ ಜಲಾಶಯದಿಂದ ಕುಡಿಯುವ ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡುತ್ತಾರೆ. ಆದರೆ, ಮಳೆಗಾಲ ಆರಂಭವಾದ ನಂತರ ಜಲಾಶಯದ ನೀರನ್ನು ಸಮರ್ಪಕವಾಗಿ ಶುದ್ಧೀಕರಣ ಮಾಡದೆ, ಸರಬರಾಜು ಮಾಡಲಾಗುತ್ತಿದೆ. ಪಟ್ಟಣದ ಪ್ರತಿಯೊಂದು ಬಡಾವಣೆಯಲ್ಲಿಯೂ ಬೆಳಗ್ಗೆ ನಲ್ಲಿಯಲ್ಲಿ ಬರುವ ನೀರು ರಾಡಿ ಮಿಶ್ರಿತವಾಗಿರುತ್ತದೆ. ಮೊದಲ ಅರ್ಧ ತಾಸಿಗೂ ಅಧಿಕ ಸಮಯ ರಾಡಿ ಮಿಶ್ರಿತ ನೀರು ಬರುತ್ತದೆ. ನಂತರ ಶುದ್ಧ ನೀರು ಬರುತ್ತದೆ.

ಅಧಿಕಾರಿಗಳ ನಿರ್ಲಕ್ಷೃ: ಎರಡು ತಿಂಗಳಿಂದ ರಾಡಿ ಮಿಶ್ರಿತ ನೀರು ಬಿಡುತ್ತಿದ್ದು, ಈ ಕುರಿತು ಮುಂಗಾಗ್ರತೆ ವಹಿಸಿ ನೀರನ್ನು ಸಮರ್ಪಕವಾಗಿ ಶುದ್ಧಗೊಳಿಸಿ ಸರಬರಾಜು ಮಾಡಬೇಕು ಅಥವಾ ನೀರು ಸರಬರಾಜು ಮಾಡುವ ಪೈಪ್‌ನೊಳಗೆ ಚರಂಡಿ ನೀರು ಹೇಗೆ ಹೋಗುತ್ತಿದೆ ಎಂಬುದನ್ನು ಪರಿಶೀಲಿಸದೆ ಅಧಿಕಾರಿಗಳು ನಿರ್ಲಕ್ಷೃವಹಿಸಿದ್ದಾರೆ ಎಂಬ ಆರೋಪ ಸಾರ್ವಜನಿಕರದ್ದು.

ಪಟ್ಟಣ ಪಂಚಾಯಿತಿಯವರು ಎರಡು ದಿನಕ್ಕೊಮ್ಮೆ ನಲ್ಲಿಯಲ್ಲಿ ನೀರು ಪೂರೈಕೆ ಮಾಡುತ್ತಾರೆ ಆರಂಭದ ಅರ್ಧ ತಾಸು ರಾಡಿ ನೀರು ಬರುತ್ತಿದ್ದು, ನೋಡಲು ಎಣ್ಣೆ ಹಾಗೆ ಕಾಣುತ್ತಿದೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹರಿಬಿಟ್ಟರೆ, ಇನ್ನು ಕೆಲವರು ಇದು ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ಇರಬಹುದು ಎಂದು ವ್ಯಂಗ್ಯವಾಡಿದ್ದಾರೆ.

ಈ ನೀರು ಕುಡಿದರೆ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆ ಸೇರುವುದು ಗ್ಯಾರಂಟಿ ಎಂದು ಪಟ್ಟಣ ಪಂಚಾಯಿತಿಯವರಿಗೆ ಮೌಖಿಕವಾಗಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಕೆಲವರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net