

ಹಿರೇಕೆರೂರ: ರೈತರು ವ್ಯವಸಾಯಕ್ಕೆ ಸೀಮಿತರಾಗದೇ ಹೈನುಗಾರಿಕೆಯಂತಹ ಉಪಕಸಬು ಮಾಡಿಕೊಂಡರೆ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ತಾಲೂಕಿನ ಯೋಗಿಕೊಪ್ಪ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ 2024-25 ನೇ ಸಾಲಿನ ವಿಸ್ತರಣಾ ಚಟುವಟಿಕೆಗಳ ಬಲಪಡಿಸುವ ಕಾರ್ಯಕ್ರಮದಡಿ ಶನಿವಾರ ಏರ್ಪಡಿಸಿದ್ದ ಹಾಲು ಕರೆಯುವ ಸ್ಪರ್ಧೆ ಮತ್ತು ಮಿಶ್ರ ತಳಿ ಹಸು, ಎಮ್ಮೆಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶಿಯ ಹಸುಗಳಲ್ಲಿ ಆರೋಗ್ಯಯುತ ಹಾಲು ಉತ್ಪಾದನೆಯಾಗುತ್ತದೆ. ಸರ್ಕಾರ ರೈತರ ಹಿತದೃಷ್ಟಿಯಿಂದ ಹೈನುಗಾರಿಕೆಗೆ ಅನೇಕ ಸೌಲಭ್ಯ ನೀಡುತ್ತಿದ್ದು, ಇದರ ಲಾಭವನ್ನು ಪಡೆದು ರೈತರು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಎಸ್.ವಿ. ಸಂತಿ, ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಮಠದ, ಉಪಾಧ್ಯಕ್ಷೆ ಮಂಜುಳಾ ಹರಿಜನ, ಸದಸ್ಯರಾದ ಕರೇಗೌಡ ಗೌಡ್ರ, ವನಜಾಕ್ಷಮ್ಮ ಬಣಕಾರ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ನಾಗಪ್ಪ ಅಸುಂಡಿ, ಕಾರ್ಯದರ್ಶಿ ಶಿವು ಮುಳಗುಂದ, ಉಮೇಶ ಹಂಸಭಾವಿ, ಡಾ. ಗಿರೀಶ ರೆಡ್ಡೇರ, ಡಾ. ಉಮೇಶ ಹೊನ್ನತ್ತಿ, ಡಾ. ಪವನ್ ಬಿ.ಎಲ್., ಡಾ. ಅಮಿತ್ ಪುಟಾಣಿ, ಡಾ. ನಾಗರಾಜ ಜಲ್ಲೇರ, ಡಾ. ಕವಿರಾಜ ಐರಣಿ, ಡಾ. ಪವನ ಬೆಳಕೇರಿ, ಡಾ. ಪ್ರವೀಣ ಮರಿಗೌಡರ, ಡಾ.ಮಂಜುನಾಥ ಮಾಯಾಚಾರಿ, ಡಾ. ನವೀನಕುಮಾರ ಆರ್.ಎಚ್., ಡಾ. ಶ್ರಾವ್ಯ ಜಿ.ಎಸ್., ಚೇತನಕುಮಾರ ಎಂ.ಜಿ., ಅನಿಲಕುಮಾರ ಎಸ್.ಜಿ., ಮೃತ್ಯುಂಜಯ ಕುಲಕರ್ಣಿ, ಕೆ.ಪಿ. ಕಾಕೋಳ, ಶಂಭುಲಿಂಗ ಹಂಸಭಾವಿ ಹಾಗೂ ಗ್ರಾಮಸ್ಥರು, ರೈತರು ಇದ್ದರು. ಪಶು ವೈದ್ಯಾಧಿಕಾರಿ ಡಾ.ಕಿರಣ ಎಲ್., ಡಾ.ಪ್ರವೀಣ ಮರಿಗೌಡ್ರ ನಿರ್ವಹಿಸಿದರು.