

ದಾಂಡೇಲಿ: ಕ್ರೀಡೆಯಲ್ಲಿ ಭಾಗವಹಿಸುವದರಿಂದ ಮಕ್ಕಳಲ್ಲಿ ಆರೋಗ್ಯದ ಸುಧಾರಣೆ, ಬುದ್ಧಿ ವಿಕಸನ ಉಂಟಾಗುತ್ತದೆ ಹಾಗಾಗಿ ಮಕ್ಕಳು ವಿದ್ಯಾಭ್ಯಾಸದ ಜತೆ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ನಗರದ ನಗರ ಠಾಣೆಯ ಪಿ.ಎಸ್.ಐ ಅಮಿನ್ ಅತ್ತಾರ ಅಭಿಪ್ರಾಯಪಟ್ಟರು.
ನಗರದ ಲಯನ್ಸ್ ಶಾಲೆಯ ವಾರ್ಷಿಕ ಕ್ರೀಡಾಕೂಟವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಸೋಲು ಗೆಲವಿಗಿಂತ ಭಾಗವಹಿಸುವಿಕೆ ಮಹತ್ವದ್ದು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಲಯನ್ಸ ಶಾಲೆ ಕಾರ್ಯದರ್ಶಿ ಯು.ಎಸ್ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾ ಮನೋಭಾವನೆಯಿಂದ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದರು.
ವೇದಿಕೆಯಲ್ಲಿ ಲಯನ್ಸ್ನ ನಿಕಟಪೂರ್ವ ಅಧ್ಯಕ್ಷ ವೀರೇಶ ಯರಗೇರಿ, ಲಯನ್ಸ್ನ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಉದಯ ಶೆಟ್ಟಿ, ಲಯನ್ಸ್ನ ಜೊನ್ ಚೇರ್ಮನ್ ಸೈಯ್ಯದ್ ಇಸ್ಮಾಯಿಲ್ ತಂಗಳ, ಶಾಲೆಯ ಖಜಾಂಚಿ ಇಮ್ತಿಯಾಜ ಅತ್ತಾರ, ಶಾಲೆಯ ಮುಖ್ಯೋಪಾಧ್ಯಾಯೆ ಪಿಂಕಿ ಪಾಥ್ರೋ, ಕ್ರೀಡಾ ಶಿಕ್ಷಕ ಯಾಕೂಬ್ ಶೇಖ್ ಉಪಸ್ಥಿತರಿದ್ದರು.