ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ಜನರ ಬದುಕು ಸುಧಾರಣೆ

IMG-20240616-WA0245
ಅರಸೀಕೆರೆ ತಾಲೂಕಿನ ಜಿ.ಹೊನ್ನೇನಹಳ್ಳಿ ಗೌಡನಕಟ್ಟೆ ಗ್ರಾಮದ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಕೆರೆಯ ಅಭಿವೃದ್ಧಿ ಕಾರ್ಯವನ್ನು ತಾಲೂಕು ಯೋಜನಾಧಿಕಾರಿ ಅಕ್ಷತಾ ರೈ ನಾಗರಾಜ್, ಲಕ್ಷ್ಮಣ್, ಚಂದ್ರಶೇಖರ್, ಚೈತ್ರಾ, ಸೀತಾರಾಂ ವೀಕ್ಷಿಸಿದರು.
Published on

ಅರಸೀಕೆರೆ ಗ್ರಾಮಾಂತರ: ಗ್ರಾಮೀಣ ಜನರ ಬದುಕಿನ ಸುಧಾರಣೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಾಲೂಕಿನ ಹಲವೆಡೆ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ತಾಲೂಕು ಯೋಜನಾಧಿಕಾರಿ ಅಕ್ಷತಾ ರೈ ಮಾಹಿತಿ ನೀಡಿದರು

.
ಜಿ.ಹೊನ್ನೇನಹಳ್ಳಿ ಗೌಡನಕಟ್ಟೆ ಗ್ರಾಮದಲ್ಲಿ ಇತ್ತೀಚೆಗೆ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ರಾಜ್ಯದ ಎಲ್ಲೆಡೆ ಕರೆ-ಕಟ್ಟೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಇದರಿಂದ ಕೆರೆಯಲ್ಲಿ ಹೆಚ್ಚು ನೀರು ಸಂಗ್ರಹವಾಗುತ್ತದೆ. ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತನ್ನು ನೀಡುವ ನಿಟ್ಟಿನಲ್ಲಿ ಕೆರೆಯ ಬದಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಕೆರೆ ಅಭಿವೃದ್ಧಿ ಸಮಿತಿಯ ಸದಸ್ಯ ನಾಗರಾಜ್ ಮಾತನಾಡಿ, ಕೆರೆ ಕಟ್ಟೆಯ ಅಭಿವೃದ್ಧಿಯಿಂದ ಜನ, ಜಾನುವಾರುಗಳಿಗೆ ಬಹಳ ಅನುಕೂಲ ಆಗಲಿದೆ. ಅಂತರ್ಜಲ ಹೆಚ್ಚುವ ಮೂಲಕ ಸುತ್ತಲ ಕೃಷಿ ಭೂಮಿಗೆ ಸಹಕಾರಿಯಾಗಲಿದೆ. ಗ್ರಾಮದಲ್ಲಿ ಕಟ್ಟೆ ತುಂಬಿದರೆ ವರ್ಷವಿಡಿ ನೀರು ನಿಲ್ಲುತ್ತದೆ. ಕಟ್ಟೆಯೊಳಗಿನ ಹೆಚ್ಚು ಹೂಳನ್ನು ತೆಗೆಯಲಾಗಿದ್ದು, ಹೆಚ್ಚು ನೀರು ಸಂಗ್ರಹವಾಗುತ್ತದೆ. ಶ್ರೀ ಕ್ಷೇತ್ರದ ವತಿಯಿಂದ ಕೆರೆ ಅಭಿವೃದ್ಧಿ ಮೂಲಕ ಗ್ರಾಮಕ್ಕೆ ಉತ್ತಮ ಕೊಡುಗೆ ನೀಡುರುವುದು ಸಂತಸದ ವಿಚಾರ ಎಂದರು.

ಕಟ್ಟೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ನಿವೃತ್ತ ಶಿಕ್ಷಕ ನಾಗರಾಜ್, ಗ್ರಾಮ ಪಂಚಾಯಿತಿ ಬಿಲ್‌ಕಲೆಕ್ಟರ್ ಲಕ್ಷ್ಮಣ್, ನಿವೃತ್ತ ಶಿಕ್ಷಕ ಚಂದ್ರಶೇಖರ್, ಸೇವಾ ಪ್ರತಿನಿಧಿ ಚೈತ್ರಾ, ಮೇಲ್ವಿಚಾರಕರಾದ ಸೀತಾರಾಮ್, ಜನ ಜಾಗೃತಿ ಸಮಿತಿ ಸದಸ್ಯರಾದ ಎಚ್.ಡಿ.ಸೀತಾರಾಮ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net