ರಕ್ತದಾನದಿಂದ ಮನೋದೈಹಿಕ ಆರೋಗ್ಯ ವೃದ್ಧಿ

blood camp
Published on

ಹುಬ್ಬಳ್ಳಿ: ರಕ್ತದಾನ ಮಾಡುವುದರಿಂದ ಮನೋದೈಹಿಕ ಆರೋಗ್ಯ ವೃದ್ಧಿಯಾಗಲಿದೆ. ಯುವಕರು ರಕ್ತದಾನ ಶಿಬಿರ ಆಯೋಜಿಸುವುದಲ್ಲದೇ ಜಾಗೃತಿ ಮೂಡಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ(ಐಎಂಎ) ಹುಬ್ಬಳ್ಳಿ ಶಾಖೆ ಅಧ್ಯಕ್ಷ ಡಾ. ಸುಭಾಷ ಬಬ್ರುವಾಡ ಸಲಹೆ ನೀಡಿದರು.

ಪ್ರವಾದಿ ಮೊಹ್ಮದ್ ಪೈಗಂಬರ್ ಜನ್ಮದಿನ ನಿಮಿತ್ತ ಜಮಾತ್ ಅಹಲೆ ಸುನ್ನತ್ ಕರ್ನಾಟಕ ಹುಬ್ಬಳ್ಳಿ ಬ್ರಾಂಚ್ ಹಾಗೂ ಡಾ. ಬಿಜಾಪುರ ಆಸ್ಪತ್ರೆ ಆಶ್ರಯದಲ್ಲಿ ನಗರದ ಡಾ. ಬಿಜಾಪುರ ಆಸ್ಪತ್ರೆಯಲ್ಲಿ ಭಾನುವಾರ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ಡಾ. ಖ್ವಾಜಾ ಮೈನುದ್ದೀನ್ ಬಿಜಾಪುರ ಮಾತನಾಡಿ, ಯುವಕರು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಸಮೃದ್ಧ ಸಮಾಜ ನಿರ್ವಿುಸಬೇಕು. ನೀವು ಮಾಡುವ ಉತ್ತಮ ಕಾರ್ಯಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು ಎಂದರು.

ಧರ್ಮ ಗುರು ಹಜರತ್ ಸೈಯದ್ ತಾಜುದ್ದೀನ್ ಫೀರಾ ಮಾತನಾಡಿದರು. 100ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಹೆಚ್ಚು ಸಲ ರಕ್ತದಾನ ಮಾಡಿದವರನ್ನು ಸನ್ಮಾನಿಸಲಾಯಿತು.

ಸಂಘಟನೆ ಕಾರ್ಯದರ್ಶಿ ಮೌಲಾನಾ ನಿಯಾಜ ಆಲಂ, ಪ್ರಮುಖರಾದ ಬಾಬಾಜಾನ ಮುಧೋಳ, ನಜೀರ್​ಅಹ್ಮದ್ ಕೋಲಕಾರ, ಮೊಹ್ಮದ್ ಯುಸೂಫ್ ಸುಂಡಕೆ, ಶಿರಾಜ್​ಅಹ್ಮದ್ ಕುಡಚಿವಾಲೆ, ಮೌಲಾನಾ ಅಬ್ದುಲ್ ಹಕೀಂ ಖಾದ್ರಿ, ಇಸ್ರಾದ್​ಅಹ್ಮದ್ ಬಲ್ಲಾರಿ (ಬಲ್ಲಾಸೆಠೆ) ಡಾ. ಮಮತಾ ಹಲಗೇರಿ, ಡಾ. ನಯೀಮಾ ಯಾಸ್ಮೀನ್ ಬಿಜಾಪುರ, ಡಾ. ರಾಜೇಶ, ಡಾ. ಶೇರಖಾನ್, ಡಾ. ಇರ್ಫಾನ್ ಮುಜಾಹಿದ್, ಮುನ್ನಾ ಹೆಬ್ಬಳ್ಳಿ, ಜಕ್ರಿಯಾ ಮದ್ದೀನ್, ಮುಜೀಬ್ ಮಕಾನದಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net