

ಹುಕ್ಕೇರಿ: ಯುವ ಜನಾಂಗಕ್ಕೆ ಹಿರಿಯರು ಸೇವಿಸುತ್ತಿದ್ದ ಪೌಷ್ಟಿಕ ಆಹಾರ ಪದ್ಧತಿ ತಿಳಿಸಿಕೊಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜಣ್ಣ ಸಂಕನ್ನವರ ಹೇಳಿದರು.
ಸ್ಥಳಿಯ ಅಡವಿಸಿದ್ಧೇಶ್ವರ ಮಠದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಪೌಷ್ಟಿಕ ಆಹಾರ ದಿನ ಉದ್ಘಾಟಿಸಿ ಮಾತನಾಡಿ, ಜಂಕ್ ುಡ್ ಸೇವನೆ ಕಡಿಮೆ ಮಾಡಿ, ತರಕಾರಿ, ಹಣ್ಣು&ಹಂಪಲು, ಹಾಲು ಸೇವನೆಯಿಂದ ಉತ್ತಮ ಆರೋಗ್ಯದ ಜತೆ ದೀರ್ಘಾಯುಷ್ಯಗಳಾಗಲು ಸಾಧ್ಯ ಎಂದರು.
ಸಿವಿಲ್ ನ್ಯಾಯಾಧೀಶ ಆದಿತ್ಯ ಕಲಾಲ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಸಾಯನಿಕ ಬಳಸಿದ ಆಹಾರ ಮಾರಾಟ ಹೆಚ್ಚಾಗಿದೆ. ಸಾವಯವ ಆಹಾರ ಸೇವನೆ ಮಾಡುಬೇಕು ಎಂದರು. ವಕೀಲ ಭೀಮಸೇನ ಬಾಗಿ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಮಲಾ ಹಿರೇಮಠ ಉಪನ್ಯಾಸ ನೀಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೊಳೆಪ್ಪ ಎಚ್., ವಕೀಲರ ಸಂದ ಅಧ್ಯಕ್ಷ ಕೆ.ಬಿ.ಕುರಬೇಟ, ಉಪಾಧ್ಯಕ್ಷ ಬಿ.ಎಂ.ಜಿನರಾಳಿ, ಕಾರ್ಯದರ್ಶಿ ಎಸ್.ಜಿ.ನದ್ಾ, ಉಮೇಶ ದಡ್ಡಿಮನಿ, ಅನಿತಾ ಕುಲಕರ್ಣಿ, ಆಶಾ ಸಿಂಗಾಡಿ, ಏಗನ್ನವರ, ಪ್ರಕಾಶ ಕಲ್ಲೋಳಿ, ಸಿಪಿಐ ಮಹಾಂತೇಶ ಬಸಾಪುರ ಇತರರಿದ್ದರು.