ಸಹಕಾರ ನೀಡಿದರೆ ಸ್ವಚ್ಛತೆಯಲ್ಲಿ ಸುಧಾರಣೆ

TKE parisara
ಹಳಿಯೂರು ಸಮೀಪ ಸ್ವಚ್ಛ ಸಂಕೀರ್ಣ ಘಟಕದ ಆವರಣದಲ್ಲಿ ಗಿಡ ನೆಡಲಾಯಿತು. ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್, ಟಿ.ದಾದಾಪೀರ್, ಟಿ.ಜಿ.ಲೋಕೇಶ್, ಆರ್.ಕುಮಾರಪ್ಪ, ತಾಹೀರಾ ತಸ್ನೀಮ್ ಇತರರಿದ್ದರು.
Published on

ತರೀಕೆರೆ: ಸದಸ್ಯರ ಅಭಿಪ್ರಾಯ, ಸಹಕಾರದಿಂದ ಪುರಸಭೆ ಸ್ವಚ್ಛ ಸಂಕೀರ್ಣದಲ್ಲಿ ಮಹತ್ವದ ಬದಲಾವಣೆ ನಿರೀಕ್ಷಿಸಲು ಸಾಧ್ಯ ಎಂದು ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಹೇಳಿದರು.

ಹಳಿಯೂರು ಸಮೀಪ ಪುರಸಭೆ ನಿರ್ಮಿಸಿರುವ ಸ್ವಚ್ಛ ಸಂಕೀರ್ಣ ಘಟಕದ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ವನಮಹೋತ್ಸವದಲ್ಲಿ ಸಸಿ ನೆಟ್ಟು ಮಾತನಾಡಿ, ಘಟಕದಲ್ಲಿ ವೈಜ್ಞಾನಿಕವಾಗಿ ಹಸಿ ಮತ್ತು ಒಣ ಕಸ ಬೇರ್ಪಡಿಸಲಾಗುತ್ತಿದೆ. ಘಟಕದ ಆವರಣದಲ್ಲಿ ಹಸರೀಕರಣಕ್ಕೆ ಒತ್ತು ನೀಡಲಾಗಿದ್ದು, ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಸ್ಥಳೀಯ ಸಂಸ್ಥೆಗಳಲ್ಲಿ ದೇಶದಲ್ಲೇ ಮೊದಲನೇಯದಾಗಿರುವ ಬ್ಲಾೃಕ್ ಸೋಲ್ಡ್ಜರ್ ್ಲೈಗಳಿಂದ (ಕಪ್ಪು ಸೈನಿಕ ಹುಳು) ಲಾರ್ವಾ ಮೊಟ್ಟೆ ಉತ್ಪಾದಿಸುವ ಘಟಕ ಇಲ್ಲಿ ಸ್ಥಾಪಿಸಲಾಗುತ್ತಿದ್ದು, ಇದನ್ನು ವೀಕ್ಷಿಸಲು ಡಿಸಿ ಆಸಕ್ತಿ ವಹಿಸಿದ್ದಾರೆ. ಮಲತ್ಯಾಜ್ಯ ಘಟಕ ಸ್ಥಾಪನೆಗೆ ಮಂಜೂರಾತಿ ಸಿಕ್ಕಿದ್ದು, ಸದ್ಯದಲ್ಲೇ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಸದಸ್ಯ ಟಿ.ದಾದಾಪೀರ್ ಮಾತನಾಡಿ, ಪ್ಲಾಸ್ಟಿಕ್‌ನ ಹಾನಿಕಾರಕ ಅಂಶ ಗಾಳಿಗೂ ಸೇರುತ್ತಿದೆ. ರಾಷ್ಟ್ರೀಯ ಅರಣ್ಯ ನೀತಿ ಅನ್ವಯ ಹಸಿರು ಉಳಿದಿಲ್ಲ. ಗಿಡ, ಮರ ಬೆಳೆಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.
ಕಸ ವಿಲೇವಾರಿಗಾಗಿ ಖರೀದಿಸಿರುವ ಎರಡು ಆಟೋ ಟಿಪ್ಪರ್‌ಗಳನ್ನು ಸೇವೆಗೆ ನೀಡಲಾಯಿತು. ಸದಸ್ಯರಾದ ಟಿ.ಜಿ.ಲೋಕೇಶ್, ಆರ್.ಕುಮಾರಪ್ಪ, ಚೇತನ್, ಪಾರ್ವತಮ್ಮ, ರಿಹಾನಾ ಪರ್ವೀನ್, ಕಮಲಾ, ಸಿ.ಆಶಾ, ಗೀತಾ, ದಿವ್ಯಾ, ಪರಿಸರ ಇಂಜಿನಿಯರ್ ತಾಹೀರಾ ತಸ್ನೀಮ್, ವ್ಯವಸ್ಥಾಪಕ ವಿಜಯಕುಮಾರ್, ಹಿರಿಯ ಆರೋಗ್ಯ ನಿರೀಕ್ಷಕ ಟಿ.ಸಿ.ಮಹೇಶ್ವರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net