ರಾಷ್ಟ್ರ ಅಭಿವೃದ್ಧಿಗೆ ಶಿಕ್ಷಣ ವ್ಯವಸ್ಥೆ ಸುಧಾರಿಸಲಿ

25 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಸಮಾಜದಲ್ಲಿ ಸಾಧಕರು ಬಾಲ್ಯದಿಂದಲೇ ತಮ್ಮ ಜೀವನದಲ್ಲಿ ಶಿಸ್ತು, ಕಠಿಣ ಪರಿಶ್ರಮ, ಗುಣ ಹಾಗೂ ಉತ್ತಮ ಸಂಸ್ಕಾರ ಅಳವಡಿಸಿಕೊಂಡಿದ್ದರು. ಸಂಸ್ಕಾರ ಭಾರತೀಯ ಮುಖ್ಯ ಉದ್ದೇಶವು ಮಕ್ಕಳಲ್ಲಿ ಮತ್ತು ಸಮಾಜದಲ್ಲಿ ಉತ್ತಮ ಸಂಸ್ಕಾರದ ಅರಿವು ಮೂಡಿಸುವುದರ ಜತೆಗೆ ಅವರ ಪ್ರತಿಭೆ ಗುರುತಿಸಿ ಬೆಳಕಿಗೆ ತರುವುದಾಗಿದೆ ಎಂದು ಸಂಸ್ಕಾರ ಭಾರತೀಯ ಉತ್ತರ ಪ್ರಾಂತ ಸಂಘಟನಾ ಕಾರ್ಯದರ್ಶಿ ಡಾ.ಶಶಿಧರ ನರೇಂದ್ರ ಹೇಳಿದರು.

ಇಲ್ಲಿನ ರಂಗಾಯಣದ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಸಂಸ್ಕಾರ ಭಾರತಿ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ನೃತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರವು ಅಭಿವೃದ್ದಿಯಾಗಬೇಕಾದರೆ ಶಿಕ್ಷಣ ವ್ಯವಸ್ಥೆ ಸುಧಾರಣೆ ಆಗಬೇಕು. ಇಂದಿನ ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಅಗತ್ಯವಿದೆ ಎಂದರು.

ಡಾ.ವಿಶ್ವನಾಥ ಹಿರೇಮಠ ಮಾತನಾಡಿ, ಇಂದು ನಮ್ಮ ಮಕ್ಕಳು ಕಲೆ, ಸಂಗೀತ, ನೃತ್ಯ ಸಾಹಿತ್ಯದಲ್ಲಿ ಅಪ್ರತಿಮ ಸಾಧನೆ ಮಾಡುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಒಳ್ಳೆ ವ್ಯಕ್ತಿತ್ವ ನಿರ್ಮಾಣ ಆಗಲು ಸಾಧ್ಯವಾಗಿದೆ ಎಂದರು.

ಡಾ.ಸೌಭಾಗ್ಯ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ವಿದುಷಿ ವಿಜೇತಾ ವೇರ್ಣೆಕರ, ಶಿಲ್ಪಾ ಮೊಕಾಶಿ ಪಾಂಡೆ, ಅಥರ್ವ ಅವರಿಗೆ ಸನ್ಮಾನಿಸಲಾಯಿತು.

ಪ್ರಸಾದ ಮಡಿವಾಳರ, ಡಾ.ವಿಜಯ ತ್ರಾಸದ, ಅಶೋಕ ಮೊಕಾಸಿ, ಬಿ.ಎಂ.ಶರಭೇಂದ್ರ ಸ್ವಾಮೀಜಿ, ಅನಿಲ ಮೊಕಾಶಿ, ಸಂಜಯ ಪಾಂಡೆ, ಆರತಿ ದೇವಶಿಖಾಮಣಿ, ಶಶಿಧರ ಲೋಹಾರ್​, ಸದಾಶಿವ ಐಹೊಳೆ, ಬಸವರಾಜ ನಿಡಗುಂದಿ, ಮಲ್ಲಿಕಾ ಬಿ.ಎನ್​., ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net