ಯೋಗದಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ

21 hnd yoga
ಹುನಗುಂದ ಸಮೀಪದ ಘಟ್ಟಿಗನೂರದ ಶ್ರೀ ಶುಕಮುನೇಶ್ವರ ಪ್ರೌಢಶಾಲೆ ಆವರಣದಲ್ಲಿ ‘ವಿಜಯವಾಣಿ’ ಮಾಧ್ಯಮ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡು ಯೋಗಾಭ್ಯಾಸ ಮಾಡಿದರು.
Published on

ಹುನಗುಂದ: ಯೋಗ, ಧ್ಯಾನ, ಪ್ರಾಣಾಯಾಮಗಳಿಂದ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಮುಖ್ಯಶಿಕ್ಷಕ ಡಿ.ಎಸ್. ಪಂಚಾಳ ಹೇಳಿದರು.

ತಾಲೂಕಿನ ಘಟ್ಟಿಗನೂರದ ಶ್ರೀ ಶುಕಮುನೇಶ್ವರ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ನಡೆದ ಹುನಗುಂದದ ಬೆಳಕು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಹಯೋಗ ಹಾಗೂ ‘ವಿಜಯವಾಣಿ’ ಮಾಧ್ಯಮ ಪ್ರಾಯೋಜಕತ್ವದಲ್ಲಿ ಅಂತಾರಾಷ್ಟ್ರೀಯ ವಿಶ್ವಯೋಗ ದಿನಾಚರಣೆ ಕಾರ್ಯಕ್ರದಲ್ಲಿ ಅವರು ಮಾತನಾಡಿದರು.

ಯೋಗಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಹಿಂದಿನ ಕಾಲದಲ್ಲಿ ಋಷಿಮುನಿಗಳು ನೂರಕ್ಕೂ ಹೆಚ್ಚಿನ ವರ್ಷ ಬದುಕಲು ಅವರು ಪ್ರತಿನಿತ್ಯ ಯೋಗ ಮಾಡುತ್ತಿದ್ದರು. ಆದ್ದರಿಂದ ಉತ್ತಮ ಬದುಕಿಗೆ ಯೋಗ ಅತ್ಯಗತ್ಯವಾಗಿದೆ. ನಿತ್ಯ ನಿಯಮಿತ ಯೋಗ ಮಾಡುವುದರಿಂದ ಮನಸ್ಸಿನ ಹಾಗೂ ದೇಹದ ಆರೋಗ್ಯ ಉತ್ತಮಪಡಿಸಿಕೊಳ್ಳಬಹುದು ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಯೋಗ ಪಟು ಯೋಧ ಮಹಾಂತೇಶ ಗೌಡರ ಮಾತನಾಡಿ, ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ನಿತ್ಯ ಯೋಗ ಮಾಡಬೇಕು. ನಿಯಮಿತವಾಗಿ ಊಟ ಮಾಡಬೇಕು. ಯೋಗದಿಂದ ಶಿಸ್ತು ಮತ್ತು ಏಕಾಗ್ರತೆಯನ್ನು ಜೀವನದಲ್ಲಿ ರೂಡಿಸಿಕೊಳ್ಳಬೇಕೆಂದು ತಿಳಿಸಿದರು.
ಪಿ.ಎಸ್. ಸೂಳಿಭಾವಿ ಮಾತನಾಡಿದರು.

ಶಾಲೆ ಆಡಳಿತ ಮಂಡಳಿ ಕಾರ್ಯದರ್ಶಿ ಹನಮಗೌಡರ ಬಸನಗೌಡರ, ವೆಂಕನಗೌಡ ಬಾಲನಗೌಡರ, ಬಿ.ಎ. ಶಿವಣಗಿ, ವಿ.ಆರ್. ಹಿರೇಮಠ, ಶಿಕ್ಷಕರಾದ ಎಸ್.ಐ. ಚಲವಾದಿ, ಎ.ಬಿ. ಜಾಧವ, ವಿ.ಬಿ. ಪಾಟೀಲ. ಬಿ.ಎಂ.ಪಾಟೀಲ, ಹನಮಗೌಡ ಹೊಸಮನಿ, ‘ವಿಜಯವಾಣಿ’ ವರದಿಗಾರ ಚಂದ್ರು ಗಂಗೂರ, ಬೆಳಕು ಗ್ರಾಮೀಣ ಅಭಿವೃದ್ಧಿ ಕಾರ್ಯದರ್ಶಿ ಶರಣು ಚಳಗೇರಿ, ಖಜಾಂಚಿ ಸಚಿನ್ ಮಾಹೆನ್ನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net