ನೃತ್ಯದಿಂದ ಏಕಾಗ್ರತೆ ವೃದ್ಧಿ, ನೂಪುರ ನೃತ್ಯ ಅಕಾಡೆಮಿ ನಿರ್ದೇಶಕಿ ಸುಲೋಚನಾ ವಿ.ಭಟ್ ಅಭಿಪ್ರಾಯ

bramari
ಮಂಗಳೂರಿನ ನಾದನೃತ್ಯ ಕಲಾ ಶಾಲೆಯಲ್ಲಿ ತಿಂಗಳ ಸರಣಿ ಕಾರ್ಯಕ್ರಮವನ್ನು ನೂಪುರ ನೃತ್ಯ ಅಕಾಡೆಮಿಯ ನಿರ್ದೇಶಕಿ ವಿದುಷಿ ಸುಲೋಚನಾ ವಿ.ಭಟ್ ಉದ್ಘಾಟಿಸಿದರು. ನೃತ್ಯಗುರು ಭ್ರಮರಿ ಶಿವಪ್ರಕಾಶ್, ಕೆನರಾ ಹೈಸ್ಕೂಲ್ ಮುಖ್ಯ ಶಿಕ್ಷಕಿ ಸುರೇಖಾ ಎಂ.ಎಚ್. ಮೊದಲಾದವರಿದ್ದರು.
Published on

ಮಂಗಳೂರು: ಏಕವ್ಯಕ್ತಿ ನೃತ್ಯ ಪ್ರದರ್ಶನದಿಂದ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚುತ್ತದೆ ಎಂದು ನೂಪುರ ನೃತ್ಯ ಅಕಾಡೆಮಿ ನಿರ್ದೇಶಕಿ ಸುಲೋಚನಾ ವಿ.ಭಟ್ ಹೇಳಿದರು.
ಮಂಗಳೂರಿನ ನಾದನೃತ್ಯ ಕಲಾ ಶಾಲೆಯಲ್ಲಿ ತಿಂಗಳ ಸರಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನೃತ್ಯ ಶಾಲೆಯ ಗುರು ಭ್ರಮರಿ ಶಿವಪ್ರಕಾಶ್ ಅವರ ಪುತ್ರಿ ಹಾಗೂ ಶಿಷ್ಯೆ ಶುಕೀ ರಾವ್ ನೃತ್ಯ ಕಾರ್ಯಕ್ರಮ ನೀಡಿದರು.
ಮೊದಲಿಗೆ ತಾಳ ಮಾಲಿಕೆಯ ಅಲರಿಪು, ಗಣಪತಿಯ ಸ್ತುತಿಯಿರುವ ಶಬ್ದಂ, ಗಂಗಾವತರಣದ ಕತೆಯಿರುವ ಮಹಾದೇವ ಶಿವ ಶಂಭೋ ಹಾಗೂ ಭಾವಯಾಮಿ ರಘುರಾಮಂ ಎಂಬ ಕೀರ್ತನೆಗೆ ನೃತ್ಯ ಪ್ರದರ್ಶನ ನೀಡಿದರು.
ಕೆನರಾ ಹೈಸ್ಕೂಲ್ ಸಿ.ಬಿ.ಎಸ್.ಇ ಶಾಲೆ ಮುಖ್ಯ ಶಿಕ್ಷಕಿ ಸುರೇಖಾ ಎಂ.ಎಚ್. ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳೂ ಮಾತೃಭಾಷೆಯ ಬಗ್ಗೆ ಹೊಂದಬೇಕಾದ ಪ್ರೀತಿಯ ಬಗ್ಗೆ ಅರಿವು ಮೂಡಿಸಿ ಶುಭ ಹಾರೈಸಿದರು. ನೃತ್ಯ ಪ್ರದರ್ಶಿಸಿದ ಶುಕೀ ರಾವ್ ಅವರನ್ನು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net