ಅಸಮರ್ಪಕ ತ್ಯಾಜ್ಯ ನಿರ್ವಹಣೆಯಿಂದ ಪರಿಸರ ಮಾಲಿನ್ಯ

5Anand1
ಝಾರವಾಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಸುರೇಖಾ ಪಾಟೀಲ ಉದ್ಘಾಟಿಸಿದರು. ಮಲಪ್ರಭಾ ಪಾಟೀಲ, ಎಂ.ಎಂ.ಗಡಗಲಿ,ಬಸವರಾಜ ಮಣ್ಣಿಕೇರಿ, ಸಿದ್ದಪ್ಪ ಹಿತ್ತಲಮನಿ, ಲತಾ ನೇಸರಕರ ಇತರರಿದ್ದರು.
Published on

ಬೆಳಗಾವಿ: ಆಧುನಿಕ ಜೀವನದ ಶೈಲಿಯ ಅನುಕರಣೆ, ತ್ಯಾಜ್ಯದ ಅಸಮರ್ಪಕ ನಿರ್ವಹಣೆಯಿಂದ ಪರಿಸರ ಮಾಲಿನ್ಯ ಉಂಟಾಗಿ ಆರೋಗ್ಯ ಸಮಸ್ಯೆ, ಮಣ್ಣಿನ ಮಾಲಿನ್ಯ ಹಾಗೂ ಪ್ರಾಣಿ ಪಕ್ಷಿಗಳ ಜೀವಕ್ಕೆ ತೊಂದರೆಯಾಗುತ್ತಿದೆ ಎಂದು ಸಂಪನ್ಮೂಲ ವ್ಯಕ್ತಿ ಸುರೇಖಾ ಪಾಟೀಲ ಕಳವಳ ವ್ಯಕ್ತಪಡಿಸಿದರು.

ತಾಲೂಕಿನ ಝಾರವಾಡಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವದ್ಧಿ ಸಂಸ್ಥೆ, ಮಹಿಳಾ ಕಲ್ಯಾಣ ಸಂಸ್ಥೆ, ಸಂಯುಕ್ತ ಆಶ್ರಯದಲ್ಲಿ ಜಿಪಂ ಸಹಕಾರದೊಂದಿಗೆ ಈಚೆಗೆ ಆಯೋಜಿಸಿದ್ದ ನಮ್ಮ ನಡೆ ಸುಸ್ಥಿರ ಸ್ವಚ್ಛತೆ ಕಡೆ ಕಾರ್ಯಕ್ರಮ, ಕ್ಷೇತ್ರ ಮಟ್ಟದ ಸ್ವ ಸಹಾಯ ಮಹಿಳೆಯರಿಗೆ ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಲಪ್ರಭಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಎಂ.ಎಂ.ಗಡಗಲಿ, ಬಸವರಾಜ ಮಣ್ಣಿಕೇರಿ, ಸಿದ್ದಪ್ಪ ಹಿತ್ತಲಮನಿ, ರೇಖಾ ಬಸಪ್ಪ ಮಾಡ, ಲತಾ ನೇಸರಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net