ೊರಗುತ್ತಿವೆ ಉದ್ಯಾನವನಗಳು!: ಮೂಲ್ಕಿಯಲ್ಲಿ ನಿರ್ವಹಣೆಗಿಲ್ಲ ಆದ್ಯತೆ : ಕ್ರಮಕ್ಕೆ ಸಾರ್ವಜನಿಕರ ಒತ್ತಾಯ

New Project (19)
Published on

ವಿಜಯವಾಣಿ ಸುದ್ದಿಜಾಲ ಮೂಲ್ಕಿ

ಮೂಲ್ಕಿಯನ್ನು ಉದ್ಯಾನ ನಗರಿಯಾಗಿ ಬೆಳೆಸಬೇಕು ಎಂಬ ಉದ್ದೇಶದಿಂದ ಉದ್ಯಮಿಗಳ ಸಹಕಾರದಿಂದ ಹಲವು ಕಡೆ ಉದ್ಯಾನ ನಿರ್ಮಿಸಲಾಗಿದ್ದು, ಆದರೆ ಈಗ ಅವು ಸಮರ್ಪಕ ನಿರ್ವಹಣೆಯಿಲ್ಲದೆ ಸೊರಗುತ್ತಿವೆ.

ಮೂಲ್ಕಿ ಗಾಂಧಿ ಮೈದಾನ, ಬಪ್ಪನಾಡು ಬೀಚ್ ರೋಡ್, ಕೊಳಚಿಕಂಬಳ, ಕೆ.ಎಸ್.ರಾವ್ ನಗರದಲ್ಲಿ ನಿರ್ಮಾಣವಾಗಿರುವ ಉದ್ಯಾನವನಗಳು ನಿರ್ವಹಣೆ ಹಾಗೂ ಕನಿಷ್ಠ ನೀರು ಬಿಡುವ ವ್ಯವಸ್ಥೆಯೂ ಇಲ್ಲದೆ ಸೊರಗುತ್ತಿದೆ. ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಗಿಡಗಳು ಸೊರಗುತ್ತಿವೆ.

ಬಪ್ಪನಾಡು ಬೀಚ್ ರೋಡ್‌ನಲ್ಲಿರುವ ಉದ್ಯಾನದಲ್ಲಿ ಮಕ್ಕಳಿಗೆ ಆಡುವ ಉಪಕರಣ ಸಹಿತ ಉದ್ಯಾನ ನಿರ್ಮಿಸಲಾಗಿತ್ತು. ಆದರೆ ಈಗ ಅದು ಮುರಿದು ಹೋಗಿ ಉದ್ಯಾನ ನೋಡಲು ಅಸಹ್ಯವಾಗುತ್ತಿದೆ. ನಗರ ಪಂಚಾಯಿತಿ ಕಟ್ಟಡದ ಹಿಂದೆ ಸ್ವಾತಂತ್ರ್ಯ ಕಾಲದ ರೇಡಿಯೋ ಹೌಸ್ ಇದ್ದ ಪ್ರದೇಶವನ್ನು ಉದ್ಯಾನವನವನ್ನಾಗಿ ಹಾಗೂ ಹಿರಿಯ ಸಮಾಜ ಸೇವಕ ಎಂ.ಆರ್.ಪೂಂಜ ಸ್ಮಾರಕವಾಗಿ ನಿರ್ಮಿಸಲಾಗಿತ್ತು. ಇದೀಗ ಅಲ್ಲಿಯೂ ಸಮರ್ಪಕ ನಿರ್ವಹಣೆ ಇಲ್ಲದೆ ಗಿಡಗಳು ಒಣಗಿವೆ. ಅಲ್ಲದೇ ರೇಡಿಯೋ ಹೌಸ್ ಛಾವಣಿ ಕುಸಿಯುತ್ತಿವೆ.

ನಿರ್ವಹಣೆ ಬಗ್ಗೆ ನಗರ ಪಂಚಾಯಿತಿ ಅಧಿಕಾರಿಗಳು ತಲೆಕೆಡಿಸಿಕೊಳ್ಳದೇ ಇದ್ದಿದ್ದರಿಂದ ಸದ್ಯ ಕಸ ಗುಡಿಸುವ ಕೆಲಸ ಮಾತ್ರ ನಡೆಯುತ್ತಿದೆ. ಯುವ ಜನತೆ ನಡೆದಾಡಲು ಹಾಗೂ ವೃದ್ಧರು ವಿಶ್ರಾಂತಿ ಪಡೆಯಲು ಉದ್ಯಾನವನ ನಿರ್ವಹಣೆ ಅಗತ್ಯವಾಗಿದೆ. ಅಲ್ಲದೇ ಪುಂಡು ಪೋಕರಿಗಳ ಬಗ್ಗೆ ನಿಗಾ ಇರಿಸಲು ಸೂಕ್ತ ಭದ್ರತಾ ವ್ಯವಸ್ಥೆಗಳ ಸಹಿತ ಉದ್ಯಾನವನ ನಿರ್ಮಾಣ ಮಾಡಬೇಕು ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.

ನಗರ ಪಂಚಾಯಿತಿಯ ಕೆಲವು ಕಾರ್ಯಗಳನ್ನು ಸ್ವ-ಸಹಾಯ ಸಂಘಗಳಿಗೆ ನೀಡುವ ಯೋಜನೆ ಇದ್ದು, ಉದ್ಯಾನವನ ನಿರ್ವಹಣೆಯ ಬಗ್ಗೆಯೂ ಚಿಂತಿಸಲಾಗುವುದು. ಸತೀಶ್ ಅಂಚನ್, ಅಧ್ಯಕ್ಷರು ಮೂಲ್ಕಿ ನಗರ ಪಂಚಾಯಿತಿ. ಹಿಂದೆ ಬೆಳಗ್ಗೆ ಮತ್ತು ಸಂಜೆ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಉದ್ಯಾನದಲ್ಲಿ ಸಮಯ ಕಳೆಯಲು ಸಾಧ್ಯವಿತ್ತು. ಇದೀಗ ಗಿಡ ಮರಗಳು ಒಣಗಿವೆ. ಕೆಳಗೆ ಕುಳಿತರೆೆ ಒಣ ರೆಂಬೆ ಬೀಳುವ ಭಯ. ಅದಕ್ಕಾಗಿ ಕ್ರೀಡಾಂಗಣದಲ್ಲಿ ಕುಳಿತುಕೊಳ್ಳುತ್ತಿದ್ದೇವೆ. ಸುಂದರ, ಹಿರಿಯ ನಾಗರಿಕ https://www.vijayavani.net/honor-ro-achivers https://www.vijayavani.net/raghaveshwara-bharathi-swamiji-visit-to-badiyadka-shree-bharathi-vidyapita

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net