ಲಂಚ ಪಡೆದ ಶಿರಸ್ತೆದಾರ್ ಗೆ ಜೈಲು

Screenshot_20230905-235142~2
Published on

ಕಾರವಾರ:ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಶಿರಸ್ತೆದಾರ್ ಗೆ ಜೈಲು ಶಿಕ್ಷೆ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ವಿಶೇಷ ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

ಯಲ್ಲಾಪುರದ ತಹಸೀಲ್ದಾರ್ ಕಚೇರಿ ಶಿರಸ್ತೆದಾರ್ ವಿನಾಯಕ ಪಾಯ್ಕಾರಾಮ ಗಾಂವಕರ್ ಅವರಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ.
ಜಮೀನಿನ ವಾರಸಾ ಮಾಡಲು ಹಿತ್ಲಳ್ಳಿಯ ನಾಗೇಂದ್ರ ಶಿವರಾಮ ಹೆಗಡೆ ಅವರಿಂದ 1 ಸಾವಿರ ರೂ. ಲಂಚ ಪಡೆಯುವಾಗ ವಿನಾಯಕ ಗಾಂವಕರ್ ಲೋಕಾಯುಕ್ತ ಅಧಿಕಾರಿಗಳ ಬಳಿ ಸಿಕ್ಕಿ ಬಿದ್ದಿದ್ದರು.

ಲೋಕಾಯುಕ್ತ ಪರವಾಗಿ ಲಕ್ಷ್ಮೀಕಾಂತ ಪ್ರಭು ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net