ಅಧಿಕಾರದ ಉಳಿವಿಗೆ ತುರ್ತುಪರಿಸ್ಥಿತಿಯ ಹೇರಿಕೆ

ald-1 (1)
Published on

ಆಲ್ದೂರು: ದೇಶದಲ್ಲಿ ಯುದ್ದದ ಕಾರ್ಮೋಡ ಕವಿದಾಗ, ಅರ್ಥಿಕ ಮುಗ್ಗಟ್ಟು ಉಂಟಾದಾಗ, ಆಂತರಿಕ ಸಮಸ್ಯೆ ತಲೆದೋರಿದಾಗ ತುರ್ತು ಪರಿಸ್ಥಿತಿಯನ್ನು ಹೇರಬಹುದು. ಆದರೆ ಇಂದಿರಾಗಾಂಧಿ ತನ್ನ ಅಧಿಕಾರ ಉಳಿಸಿಕೊಳ್ಳಲು ಸ್ವಾರ್ಥಕ್ಕಾಗಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದು ಕಾಂಗ್ರೆಸ್‌ನವರ ಸರ್ವಾಧಿಕಾರಿ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂದು ಮಾಜಿ ಶಾಸಕ ಎನ್.ಮಹೇಶ್ ಹೇಳಿದರು.

ತುರ್ತು ಪರಿಸ್ಥಿತಿಗೆ 50 ವರ್ಷಗಳು ಕಳೆದ ಹಿನ್ನಲೆಯಲ್ಲಿ ಸಿಟಿಜನ್ಸ್ ಾರ್ ಸೋಷಿಯಲ್ ಜೆಸ್ಟಿಸ್ ಚಿಕ್ಕಮಗಳೂರು ಆಲ್ದೂರು-ಮೂಡಿಗೆರೆ ಘಟಕದಿಂದ ಆಯೋಜಿಸಿದ್ದ ತುರ್ತು ಪರಿಸ್ಥತಿ ಒಂದು ಕರಾಳ ನೆನಪು ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

1975 ಜೂನ್ 25ರಿಂದ ಮಾರ್ಚ್ 21 1977 ರವರೆಗೆ 21ತಿಂಗಳು ಇಂದಿರಾ ಗಾಂಧಿ ಸರ್ಕಾರ ದೇಶದ ಮೇಲೆ ಹೇರಿದ ತುರ್ತು ಪರಿಸ್ಥಿತಿ ದೇಶದ ಸಾರ್ವಭೌಮತ್ವಕ್ಕೆ ಅಂಟಿಸಿದ ಕಳಂಕ, ನ್ಯಾಯಾಂಗ, ಶಾಸಕಾಂಗ, ಕಾರ್ಯಂಗ, ಪತ್ರಿಕಾ ಮಾಧ್ಯಮವನ್ನು ತನ್ನ ರಾಜಕೀಯದ ಅಸ್ವಿತ್ವಕ್ಕಾಗಿ ಬಳಸಿಕೊಂಡು ದೇಶದ ಜನರಿಗೆ ದ್ರೋಹ ಬಗೆದರು. ಸಂವಿಧಾನ ತಿರುಚಿ ತನ್ನ ಅನುಕೂಲಕ್ಕೆ ತಕ್ಕಹಾಗೆ ತಿದ್ದು ಪಡಿಗಳನ್ನು ಮಾಡಿ ಸಂಸತ್ತನ್ನು ದುರುಪಯೋಗ ಪಡಿಸಿಕೊಂಡು ಸರ್ವಾಧಿಕಾರಿ ವರ್ತನೆ ತೋರಿದ ಇಂದಿರಾ ಗಾಂಧಿಯನ್ನು ನಾವು ಪ್ರಧಾನಿಯಾಗಿ ಒಪ್ಪಿಕೊಂಡಿದ್ದು ದೇಶದ ಜನರ ದುರಾದೃಷ್ಟ ಎಂದು ವಿಷಾದಿಸಿದರು.

ತುರ್ತು ಪರಿಸ್ಥಿತಿಯಲ್ಲಿ ಸರೆಮನೆ ವಾಸ ಅನುಭವಿಸಿದ ಕೂದುವಳ್ಳಿ ಗ್ರಾಮದ ಭವಾನಿ ಶಂಕರ್ ಭಟ್, ಸುಮಿತ್ರೇಗೌಡ, ನಾರಾಯಣ್ ಗೌಡ ಅವರನ್ನು ಗೌರವಿಸಲಾಯಿತು. ಬಿಜೆಪಿ ಮುಖಂಡರಾದ ದೀಪಕ್ ದೊಡ್ಡಯ್ಯ, ದೇವರಾಜ್ ಶೆಟ್ಟಿ , ಕಲ್ಮರಡಪ್ಪ, ಕುರುವಂಗಿ ವೆಂಕಟೇಶ್,ಪುಣ್ಯಪಾಲ್, ಈಶ್ವರಳ್ಳಿ ಮಹೇಶ್, ದಿನೇಶ್ ಮುಗಳವಳ್ಳಿ, ರವಿ ಬಸರವಳ್ಳಿ, ಗಜೇಂದ್ರ, ಕವೀಶ್, ಅರವಿಂದ್, ರವೀಂದ್ರ, ಚಂಪಾ ಜಗದೀಶ್, ಪ್ರತಿಭಾ ನವೀನ್ ,ಭವ್ಯ ನಟೇಶ್,ಶಶಿ,ಸಂಪತ್, ನಾರಾಯಣ್ ಆಚಾರ್ಯ, ನಾಗೇಶ್,ಪ್ರಸನ್ನ, ಮಹೇಶ್, ಯೋಗಿಶ್ ಅಂಬಳೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net