ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ

pdb
Published on

ಪಡುಬಿದ್ರಿ: ಸವಾಜದ ಏಳಿಗೆ ಮತ್ತು ಅಭಿವೃದ್ಧಿಯಲ್ಲಿ ಶಿಕ್ಷಕರ ಕೊಡುಗೆ ಅಪಾರವಾಗಿದೆ ಎಂದು ಪಡುಬಿದ್ರಿ ಗಣಪತಿ ಪ್ರೌಢಶಾಲಾ ನಿವೃತ್ತ ಮುಖ್ಯಶಿಕ್ಷಕ ಸಿ.ವಿ.ಮಂಜಪ್ಪ ಹೇಳಿದರು.

ಪಡುಬಿದ್ರಿ ಮಧ್ವನಗರದ ತರಂಗಿಣಿ ಮಿತ್ರಮಂಡಳಿ ವತಿಯಿಂದ ಮಧ್ವನಗರದ ಸಂಸ್ಕೃತಿಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಗೌರವ ಸ್ವೀಕರಿಸಿ ವಾತನಾಡಿದರು.

ಸಿ.ವಿ.ಮಂಜಪ್ಪ ಮತ್ತು ಅವರ ಪತ್ನಿ ನಿವೃತ್ತ ಶಿಕ್ಷಕಿ ಸವಿತಾ ಕೆ.ಭಟ್ ದಂಪತಿಯನ್ನು ಗೌರವಿಸಲಾಯಿತು. ಶಿಕ್ಷಕ ಶ್ರೀಧರ ಆಚಾರ್, ಡಾ. ರಾವೇಂದ್ರ ರಾವ್ ಬೈಲ, ಜಯಶ್ರೀ ಕೇಶವ ರಾವ್, ಪದ್ಮಶ್ರೀ ಸುರೇಶ್ ರಾವ್ ಮತ್ತು ಅಖಿಲ ಅವರನ್ನು ಅಭಿನಂದಿಸಲಾಯಿತು. ಸಂದ ಸದಸ್ಯರಿಗೆ ವೇದಪಾಠ ವಾಡಿದ ಕೃಷ್ಣಾಪುರ ಮಠದ ಯಾದವೇಂದ್ರ ಉಪಾಧ್ಯಾಯ ಅವರನ್ನು ಗೌರವಿಸಲಾಯಿತು.

ಪಿ.ಜಿ.ರವಿಕಾಂತ್ ಭಟ್ ಹೆಜವಾಡಿ, ಗೌರವಾಧ್ಯಕ್ಷ ಸದಾಶಿವ ಆಚಾರ್, ಕೋಶಾಧಿಕಾರಿ ಗೋವಿಂದ ರಾವ್ ಉಪಸ್ಥಿತರಿದ್ದರು.

ಸಂ ಅಧ್ಯಕ್ಷ ರವಾಕಾಂತ ರಾವ್ ಸ್ವಾಗತಿಸಿದರು. ಚಂದ್ರಶೇಖರ ರಾವ್ ವಂದಿಸಿದರು. ಉಪಾಧ್ಯಕ್ಷ ಶೈಲೇಂದ್ರ ಉಪಾಧ್ಯಾಯ ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರೀಧರ ಆಚಾರ್ಯ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net