

ಲಕ್ಷೆ್ಮೕಶ್ವರ: ನಿನ್ನಲ್ಲಿ ಎರಡು ರೂಪಾಯಿಗಳಿದ್ದರೆ ಒಂದು ರೂಪಾಯಿ ಆಹಾರಕ್ಕಾಗಿ ಖರ್ಚು ಮಾಡು ಅದು ಜೀವನ ಹೇಗೆ ನಡೆಸಬೇಕು ಎಂದು ತಿಳಿಸುತ್ತದೆ. ಇನ್ನೊಂದು ರೂಪಾಯಿಯನ್ನು ಪುಸ್ತಕಕ್ಕಾಗಿ ಖರ್ಚು ಮಾಡು ಅದು ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ತಿಳಿಸುತ್ತದೆ ಎಂಬ ಬಿ.ಆರ್. ಅಂಬೇಡ್ಕರ್ ಅವರ ಮಾತು ಸದಾ ನೆನಪಿನಲ್ಲಿಡಬೇಕು ಎಂದು ಎಸ್ಟಿಪಿಎಂಬಿ ಆಂಗ್ಲ ಮಾಧ್ಯಮ ಶಾಲೆ ಮುಖ್ಯಶಿಕ್ಷಕಿ ಸ್ವಾತಿ ಪೈ ಹೇಳಿದರು.
ಪಟ್ಟಣದ ಎಸ್ಟಿಪಿಎಂಬಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಸಮಾಜದಲ್ಲಿ ಶಿಕ್ಷಣದ ಮಹತ್ವ ಎಷ್ಟಿದೆ ಎಂಬುದನ್ನು ಸಂವಿಧಾನ ಶಿಲ್ಪಿ ಅಂಬೇಡ್ಕರ್ ತೋರಿಸಿಕೊಟ್ಟಿದ್ದಾರೆ. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪರಿಪಾಲಿಸಬೇಕು ಎಂದರು.
ಪ್ರಧಾನ ಗುರು ಪ್ರಭುಗೌಡ ಯಕ್ಕಿಕೊಪ್ಪ, ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಜೀವನ ಚರಿತ್ರೆ ತಿಳಿಸಿದರು. ಶಿಕ್ಷಕಿಯರಾದ ವೀಣಾ ಜಾಮನೂರ, ವಿಜಯಲಕ್ಷ್ಮೀ ಮಹಾರಾಜಪೇಟ, ಶಿವಯೋಗಿ ವಾಲಿಶೆಟ್ಟರ್ ಇತರರಿದ್ದರು.