ವಿದ್ಯಾರ್ಥಿ ಜೀವನದಲ್ಲಿ ಸ್ವಚ್ಛತೆಗೆ ಮಹತ್ವ

swachate
ಪಡುಬಿದ್ರಿ ಬೀಚ್‌ನಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸುಕುಮಾರ್ ಶ್ರೀಯಾನ್ ಮಾತನಾಡಿದರು
Published on

ಪಡುಬಿದ್ರಿ: ಪರಿಸರವನ್ನು ಸ್ವಚ್ಛವಾಗಿಡುವುದರಿಂದ ಊರು ಸ್ವಚ್ಛವಾಗಿಡಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಸ್ವಚ್ಛತೆಗೆ ಮಹತ್ವ ನೀಡಬೇಕು ಎಂದು ಪಡುಬಿದ್ರಿ ಪೊಲೀಸ್ ಠಾಣೆ ಎಸ್‌ಐ ಪ್ರಸನ್ನ ಕುಮಾರ್ ಹೇಳಿದರು.

ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಉಡುಪಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ವಿಶ್ರುದ್ ಕೋಸ್ಟಲ್ ಡೆವಲಪರ್ಸ್ ಆಶ್ರಯದಲ್ಲಿ ಪ್ರವಾಸೋದ್ಯಮ ಮತ್ತು ಶಾಂತಿ ಎಂಬ ಸಂದೇಶದೊಂದಿಗೆ ಸ್ವಭಾವ ಸ್ವಚ್ಛತಾ ಸಂಸ್ಕಾರ ಸ್ವಚ್ಛತಾ ಎಂಬ ಧ್ಯೇಯೋದ್ದೇಶದೊಂದಿಗೆ ಪಡುಬಿದ್ರಿ ಬೀಚ್‌ನಲ್ಲಿ ಶನಿವಾರ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾಡಿಪಟ್ಣ-ನಡಿಪಟ್ಣ ವಿದ್ಯಾಪ್ರಸಾರ ಸಂಘದ ಅಧ್ಯಕ್ಷ ಸುಕುಮಾರ್ ಶ್ರೀಯಾನ್, ಪಡುಬಿದ್ರಿ-ನಡಿಪಟ್ಣ ಮೊಗಗವೀರ ಸಭೆ ಅಧ್ಯಕ್ಷ ಅಶೋಕ್ ಸಾಲ್ಯಾನ್, ಹೆಜಮಾಡಿ ಕರಾವಳಿ ಕಾವಲು ಪಡೆಯ ರತ್ನಾಕರ, ಬ್ಲೂಫ್ಲಾೃಗ್ ಬೀಚ್ ಪ್ರಬಂಧಕ ವಿಜಯ ಶೆಟ್ಟಿ, ಪಡುಬಿದ್ರಿ ಕೆಪಿಎಸ್ ಪದವಿ ಪೂರ್ವ ವಿಭಾಗದ ಸುಜಾತಾ, ವಿಶ್ರುದ್ ಕೋಸ್ಟಲ್ ಡೆವಲಪರ್ಸ್ ಮುಖ್ಯಸ್ಥ ಸುಧೀಶ್ ಉಪಸ್ಥಿತರಿದ್ದರು. ಸಂತೋಷ್ ನಂಬಿಯಾರ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net