ರಕ್ತದಾನ ಮಹತ್ವದ ಅರಿವು ಅಗತ್ಯ

blood
ಕಾಪುವಿನಲ್ಲಿ ನಡೆದ ಸ್ವಯಪ್ರೇರಿತ ರಕ್ತದಾನ ಶಿಬಿರವನ್ನು ಡಾ.ವೀಣಾ ಕುಮಾರಿ ಉದ್ಘಾಟಿಸಿದರು
Published on

ಪಡುಬಿದ್ರಿ: ಹದಿನೆಂಟು ವರ್ಷ ತುಂಬುವ ಪ್ರತಿಯೊಬ್ಬರೂ ಮತದಾನದ ಹಕ್ಕು ಚಲಾವಣೆ, ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳಲು ನೀಡುವಷ್ಟೇ ಮಹತ್ವ ರಕ್ತದಾನ ಮಾಡುವುದಕ್ಕೂ ನೀಡಬೇಕಿದೆ. ಆಗ ಮಾತ್ರ ರಕ್ತದ ಬೇಡಿಕೆ ಕೊರತೆ ನೀಗಿಸಲು ಸಾಧ್ಯ ಎಂದು ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥೆ ಡಾ.ವೀಣಾ ಕುಮಾರಿ ಹೇಳಿದರು.

ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶ್ರೀದೇವಿ ಸ್ಪೋರ್ಟ್ಸ್ ಮತ್ತು ಸಾಂಸ್ಕೃತಿಕ ಸಂಘ ಕಾಪು, ಕಾಲೇಜಿನ ಐಕ್ಯೂಎಸಿ ಘಟಕ, ಯುವ ರೆಡ್‌ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ರೇಂಜರ್ಸ್ ಮತ್ತು ರೋವರ್ಸ್‌ ಘಟಕ ಹಾಗೂ ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರ ಸಹಭಾಗಿತ್ವದಲ್ಲಿ ಕಾಪುವಿನಲ್ಲಿ ಮಂಗಳವಾರ ಸ್ವಯಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಗೋಪಾಲಕೃಷ್ಣ ಎಂ.ಗಾಂವ್ಕರ್ ಅಧ್ಯಕ್ಷತೆ ವಹಿಸಿದ್ದರು. ಶ್ರೀದೇವಿ ಸ್ಪೋರ್ಟ್ಸ್ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ರವಿಚಂದ್ರ ಶೆಟ್ಟಿ, ಐಕ್ಯೂಎಸಿ ಘಟಕದ ಸಂಚಾಲಕಿ ರೋಶ್ನಿ ಯಶವಂತ್, ಯುವ ರೆಡ್‌ಕ್ರಾಸ್ ಘಟಕದ ಸಂಚಾಲಕಿ ಸುಚಿತ್ರಾ ಎಸ್.ಆರ್., ರೇಂಜರ್ಸ್ ಮತ್ತು ರೋವರ್ಸ್‌ ಘಟಕದ ಸಂಚಾಲಕಿ ಸವಿತಾ, ಎನ್ನೆಸ್ಸೆಸ್ ಸಂಚಾಲಕಿ ಮಂಜುಳಾ, ಆಡಳಿತ ವಿಭಾಗದ ನಿರ್ದೇಶಕಿ ಅಶ್ವಿತಾ ಕರ್ಕೇರ ಉಪಸ್ಥಿತರಿದ್ದರು. ವಿಜಯ್ ಸ್ವಾಗತಿಸಿ, ಮನೀಷಾ ಕಾರ್ಯಕ್ರಮ ನಿರೂಪಿಸಿ, ರಕ್ಷಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net