ಏಳಿಗೆಗೆ ಪಂಚಸೂತ್ರ ಅಳವಡಿಸುವುದು ಅಗತ್ಯ

byn
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ವಿದ್ಯಾರ್ಥಿಗಳು ತಮ್ಮ ಏಳಿಗೆಗಾಗಿ ಶ್ರದ್ಧೆ, ಶ್ರಮ, ಸಮಯಪ್ರಜ್ಞೆ, ಆತ್ಮವಿಶ್ವಾಸ ಹಾಗೂ ನಿರ್ಭಯತೆಯ ಪಂಚಸೂತ್ರಗಳನ್ನು ಅಳವಡಿಸಿಕೊಳ್ಳಬೇಕು. ರಾಷ್ಟ್ರೀಯ ಪ್ರಜ್ಞೆ ಬೆಳೆಸಿಕೊಂಡು ದೇಶಭಿಮಾನ ಮೆರೆಯಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದು ಕರ್ನಾಟಕದ ಉಚ್ಛನ್ಯಾಯಾಲಯದ ನ್ಯಾಯಾಧೀಶ ಎಚ್.ಪಿ.ಸಂದೇಶ್ ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಶನಿವಾರ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಕಾನೂನು ಮತ್ತು ಆಡಳಿತ ಪ್ರಕ್ರಿಯೆಗಳ ಕುರಿತು ಸಂವಾದ ನಡೆಸಿ ಮಾತನಾಡಿದರು.

ಪ್ರಾಂಶುಪಾಲ ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ವತಿಯಿಂದ ನ್ಯಾಯಾಧೀಶ ದಂಪತಿಯನ್ನು ಗೌರವಿಸಲಾಯಿತು. ಹೇಮಾವತಿ ಸಂದೇಶ್, ಪ್ರಾಧ್ಯಾಪಕ ವೃಂದ, ಹಳೇ ವಿದ್ಯಾರ್ಥಿ ಸಂಘ ಉಪಾಧ್ಯಕ್ಷ ಮುತ್ತಯ್ಯ ಪೂಜಾರಿ ಮತ್ತಿತರರು ಇದ್ದರು. ಹರ್ಷಿತಾ ಪ್ರಾರ್ಥಿಸಿದರು. ವಿನೋದ್ ಬಸುಪಟ್ಟದ್ ಸ್ವಾಗತಿಸಿ, ಡಾ.ಶಿವಕುಮಾರ ಪಿ.ವಿ.ವಂದಿಸಿದರು. ಸವಿತಾ ನಿರೂಪಿಸಿದರು.

ಪ್ರತಿಯೊಬ್ಬರಿಗೂ ಕಾನೂನು ಬಗ್ಗೆ ಅರಿವು ಮೂಡಬೇಕು ಮತ್ತು ಕಾನೂನಿನ ಬಗ್ಗೆ ಕನಿಷ್ಠ ಮಾಹಿತಿ ಇರಬೇಕು. ವಿದ್ಯಾರ್ಥಿಗಳು ಜಾಗೃತರಾದರೆ ಶಾಂತಿ ಸುವ್ಯವಸ್ಥೆ ನೆಲೆಸಲು ಸಾಧ್ಯವಿದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಹಾಗೂ ಸುತ್ತಮುತ್ತಲಿನ ಪ್ರದೇಶದ ಸಮಸ್ಯೆಗಳ ಬಗ್ಗೆ ಹೆತ್ತವರಲ್ಲಿ, ಶಿಕ್ಷಕರಲ್ಲಿ ಅಥವಾ ಪೊಲೀಸರೊಂದಿಗೆ ಮುಕ್ತವಾಗಿ ಚರ್ಚೆ ನಡೆಸಿ ಸದೃಢ ಸಮಾಜ ನಿರ್ಮಾಣಕ್ಕೆ ಸಹಕಾರ ನೀಡಬೇಕು. -ಎಚ್.ಪಿ.ಸಂದೇಶ್, ಹೈಕೋರ್ಟ್ ನ್ಯಾಯಾಧೀಶ https://www.vijayavani.net/the-digital-birth-certificate-is-the-problem https://www.vijayavani.net/release-of-comprehensive-literary-books-by-senior-writer-ku-go-in-udupi

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net