

ಕವಿತಾಳ: ಸಮೀಪದ ವಟಗಲ್‌ನ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಬುಧವಾರ ಆಯುಷ್ ಇಲಾಖೆ, ಜಿಲ್ಲಾಡಳಿತ ಮತ್ತು ಜಿಪಂ ಸಹಯೋಗದಲ್ಲಿ ವಿದ್ಯಾರ್ಥಿ ಚೇತನ ಆಯುಷ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಉಪನ್ಯಾಸಕಿ ಡಾ.ಅಂಬಿಕಾ ಮಾತನಾಡಿ, ಪ್ರತಿಯೊಬ್ಬರ ಆರೋಗ್ಯ ಕಾಪಾಡಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ವಿದ್ಯಾರ್ಥಿ ಚೇತನ ಆಯುಷ್ ಅಭಿಯಾನ ಮುಖಾಂತರ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿ ವಿದ್ಯಾರ್ಥಿ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಶಿಕ್ಷಕ ಚಂದ್ರಯ್ಯಸ್ವಾಮಿ ಅವರು ಯೋಗದ ಮಹತ್ವದ ಬಗ್ಗೆ ತಿಳಿಸಿದರು. ಆಯುಷ್ ವೈದ್ಯ ಶರಣಬಸಪ್ಪ ಕವಿತಾಳ, ಡಾ. ಶೀತಲ್, ಡಾ. ಹರ್ಷ, ಪ್ರಾಚಾರ್ಯ ಮಹಾಂತೇಶ, ವಟಗಲ್ ಗ್ರಾಪಂ ಅಧ್ಯಕ್ಷ ಬಸನಗೌಡ ಬಾಲರಡ್ಡಿ, ಸದಸ್ಯರಾದ ಆದನಗೌಡ, ಶಿವಣ್ಣ ಯಕ್ಲಾಸಪುರ, ಪ್ರಮುಖ ಶಿವನಗೌಡ ವಟಗಲ್ ಇತರರಿದ್ದರು.