ಕೆರೆ ತುಂಬಿಸುವ ಯೋಜನೆ ಅನುಷ್ಠಾನ ಅಗತ್ಯ

ಬ್ಯಾಲಾಳ್ ಗ್ರಾಮದಲ್ಲಿ ಸೋಮವಾರ ಕೆರೆಗಳ ತುಂಬಿಸುವ ಯೋಜನೆಗಾಗಿ ಬ್ಯಾಲಾಳ್ ಕೆರೆ ವ್ಯಾಪ್ತಿಯ ರೈತರ ಸಭೆ ನಡೆಯಿತು. ಹಾಲಸ್ವಾಮಿ ಮಠದ ಶ್ರೀ ಹಾಲಸಿದ್ದೇಶ್ವರ ಸ್ವಾಮೀಜಿ, ಕೃಷಿಭೂಮಿ ಉಳಿವಿಗಾಗಿ ನಾವು ಸಂಘಟನೆ ಜಿಲ್ಲಾಧ್ಯಕ್ಷ ಬುಡ್ಡಿ ಬಸವರಾಜ, ಬ್ಯಾಲಾಳ್ ಕೆರೆ ವ್ಯಾಪ್ತಿಯ ಪೂಜಾರ್ ಕಡ್ಲೆಪ್ಪ, ಪ್ರಮುಖರಾದ ಕುರದಗಡ್ಡಿಯ ನಾಗಪ್ಪ, ಎಚ್.ಲಕ್ಷ್ಮಣ, ಪೂಜಾರ್ ಕಡ್ಡಪ್ಪ, ಐ.ಎಂ.ಕೊಟ್ರೇಶ. ಚಂದ್ರಯ್ಯ ಇತರರಿದ್ದರು.
ಬ್ಯಾಲಾಳ್ ಗ್ರಾಮದಲ್ಲಿ ಸೋಮವಾರ ಕೆರೆಗಳ ತುಂಬಿಸುವ ಯೋಜನೆಗಾಗಿ ಬ್ಯಾಲಾಳ್ ಕೆರೆ ವ್ಯಾಪ್ತಿಯ ರೈತರ ಸಭೆ ನಡೆಯಿತು. ಹಾಲಸ್ವಾಮಿ ಮಠದ ಶ್ರೀ ಹಾಲಸಿದ್ದೇಶ್ವರ ಸ್ವಾಮೀಜಿ, ಕೃಷಿಭೂಮಿ ಉಳಿವಿಗಾಗಿ ನಾವು ಸಂಘಟನೆ ಜಿಲ್ಲಾಧ್ಯಕ್ಷ ಬುಡ್ಡಿ ಬಸವರಾಜ, ಬ್ಯಾಲಾಳ್ ಕೆರೆ ವ್ಯಾಪ್ತಿಯ ಪೂಜಾರ್ ಕಡ್ಲೆಪ್ಪ, ಪ್ರಮುಖರಾದ ಕುರದಗಡ್ಡಿಯ ನಾಗಪ್ಪ, ಎಚ್.ಲಕ್ಷ್ಮಣ, ಪೂಜಾರ್ ಕಡ್ಡಪ್ಪ, ಐ.ಎಂ.ಕೊಟ್ರೇಶ. ಚಂದ್ರಯ್ಯ ಇತರರಿದ್ದರು.
Published on

ಹಗರಿಬೊಮ್ಮನಹಳ್ಳಿ: ರೈತರ ಜೀವನಾಡಿಯಾಗಿರುವ ಕ್ಷೇತ್ರ ವ್ಯಾಪ್ತಿಯ 17 ಕೆರೆಗಳನ್ನು ತುಂಬಿಸುವ ಯೋಜನೆ ಕೈಗೂಡಿದರೆ ಕೃಷಿಗೆ ಅನುಕೂಲವಾಗಲಿದೆ ಎಂದು ಕೃಷಿ ಭೂಮಿ ಉಳಿವಿಗಾಗಿ ನಾವು ಸಂಘಟನೆ ಜಿಲ್ಲಾಧ್ಯಕ್ಷ ಬುಡ್ಡಿ ಬಸವರಾಜ ಹೇಳಿದರು.

ತಾಲೂಕಿನ ಬ್ಯಾಲಾಳ್ ಗ್ರಾಮದಲ್ಲಿ ಮಠಾಧೀಶರ ಧರ್ಮ ಪರಿಷತ್ ಮತ್ತು ಕೃಷಿ ಭೂಮಿ ಉಳಿವಿಗಾಗಿ ನಾವು ಸಂಘಟನೆ ಸಹಯೋದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೆರೆಗಳ ತುಂಬಿಸುವ ಯೋಜನೆಗಾಗಿ ಬ್ಯಾಲಾಳ್ ಕೆರೆ ವ್ಯಾಪ್ತಿಯ ರೈತರ ಸಭೆಯಲ್ಲಿ ಮಾತನಾಡಿದರು.

ಈಗಾಗಲೇ ಕೊಟ್ಟೂರಿನ ಕೆರೆ ಮತ್ತು ಉಳಿದ 16 ಕೆರೆಗಳಿಗೆ ತುಂಗಭದ್ರಾ ನದಿಯ ಹಿನ್ನೀರಿನಿಂದ ತುಂಬಿಸುವ ಯೋಜನೆ ಕೈಗಿತ್ತಿಕೊಳ್ಳಲು 379 ಕೋಟಿ ರೂ. ವೆಚ್ಚದ ಯೋಜನಾ ವರದಿ ತಯಾರಿಸಿ ಅನುಮೋದನೆ ಸಲ್ಲಿಸಲಾಗಿದೆ. ಡಾ.ನಂಜುಂಡಪ್ಪ ವರದಿ ಅನ್ವಯ ಕೊಟ್ಟೂರು ಮತ್ತು ಹಗರಿಬೊಮ್ಮನಹಳ್ಳಿ ಹಿಂದುಳಿದ ಪ್ರದೇಶವಾಗಿದ್ದು, ಅಂತರ್ಜಲ ಮಟ್ಟ ಕುಸಿದಿರುವುದರಿಂದ ರೈತರು ವ್ಯವಸಾಯಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಕೆರೆ ತುಂಬಿಸುವ ಯೋಜನೆ ಕೈಗೊಂಡಿದ್ದು. ಯೋಜನೆ ತಯಾರಿಯಂತೆ ಸರ್ಕಾರದಿಂದ ಮಂಜೂರಾಗಬೇಕಿದೆ. ಸರ್ಕಾರ ಕೂಡಲೇ ಕೆರೆತುಂಬಿಸುವ ಕಾರ್ಯ ಕೈಗೆತ್ತಿಕೊಳ್ಳಬೇಕು. ಅದಕ್ಕಾಗಿ ಹೋರಾಟಕ್ಕೆ ಸಿದ್ಧರಾಗಿದ್ದು, ಈ ಭಾಗದ ಮಠಾಧೀಶರು ನಮ್ಮೊಂದಿಗಿದ್ದಾರೆ ಎಂದರು.

ಹಾಲಸ್ವಾಮಿ ಮಠದ ಶ್ರೀ ಹಾಲಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ರೈತರ ಜೀವನಾಡಿ ತುಂಗಾಭದ್ರಾ ನದಿಯಿಂದ ಸಾಕಷ್ಟು ನೀರು ವ್ಯರ್ಥವಾಗುತ್ತದೆ. ಕೆರೆತುಂಬಿಸುವ ಯೋಜನೆಗೆ ಕೈಗೂಡಿದ್ದರೆ, ರೈತರಿಗೆ ಅನುಕೂಲವಾಗಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಸರ್ಕಾರ ಕೂಡಲೇ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು ಎಂ ತಿಳಿಸಿದರು. ಬಳಿಕ ಕೆರೆ ವ್ಯಾಪ್ತಿಯ ಪದಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಬ್ಯಾಲಾಳ್ ಕೆರೆ ವ್ಯಾಪ್ತಿಯ ಪೂಜಾರ್ ಕಡ್ಲೆಪ್ಪ, ಪ್ರಮುಖರಾದ ಕುರದಗಡ್ಡಿಯ ನಾಗಪ್ಪ, ಎಚ್.ಲಕ್ಷ್ಮಣ, ಪೂಜಾರ್ ಕಡ್ಡಪ್ಪ, ಐ.ಎಂ.ಕೊಟ್ರೇಶ. ಚಂದ್ರಯ್ಯ, ಜ್ಞಾನೇಶ, ಕೆ.ಎಂ.ವಿಶ್ವನಾಥಯ್ಯ, ದೊಡ್ಡಬಸಪ್ಪ, ಜೆ.ಹುಲುಗಪ್ಪ, ಪರಶುರಾಮ, ಬಣಕಾರ ರಮೇಶ್, ಹನುಮಂತ, ಮಂಜುನಾಥ. ಎಂ.ಮಲ್ಲಿಕಾರ್ಜುನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net