ಜೆಜೆಎಂ ಅನುಷ್ಠಾನದಿಂದ ನೀರಿನ ಸಮಸ್ಯೆ ದೂರ

28hos2p jjm news
ನೂಲಿಗ್ಗೇರಿಯಲ್ಲಿ ಜಲಜೀವನ್ ಮಿಷನ್ ಯೋಜನೆಗೆ ಗ್ರಾಪಂ ಉಪಾಧ್ಯಕ್ಷೆ ಸುಮನಾ ಭಾಸ್ಕರ್ ಚಾಲನೆ ನೀಡಿದರು. ಚಿನ್ನಮ್ಮ, ಸುಶೀಲಮ್ಮ, ಕಿಶೋರ್, ಲೋಕೇಶ್, ಮುರುಗೇಶ್, ಅಬೂಬಕರ್ ಇತರರಿದ್ದರು.
Published on

ಹೊಸನಗರ: ಗ್ರಾಮಗಳಿಗೆ ಕುಡಿಯುವ ನೀರು ಸೇರಿ ಅಗತ್ಯ ಸೌಲಭ್ಯ ಹಾಗೂ ಕಾಮಗಾರಿಯಲ್ಲಿ ಲೋಪ ಆಗದಂತೆ ಎಚ್ಚರವಹಿಸಿ ಎಂದು ಮೂಡುಗೊಪ್ಪ ಗ್ರಾಪಂ ಉಪಾಧ್ಯಕ್ಷೆ ಸುಮನಾ ಭಾಸ್ಕರ್ ತಿಳಿಸಿದರು.
ತಾಲೂಕಿನ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ನೂಲಿಗ್ಗೇರಿಯಲ್ಲಿ ಭಾನುವಾರ ೫೧ ಲಕ್ಷ ರೂ. ವೆಚ್ಚದ ಜಲಜೀವನ್ ಮಿಷನ್ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಗ್ರಾಪಂ ಸದಸ್ಯ ಎಂ.ವಿಶ್ವನಾಥ ಮಾತನಾಡಿ, ನೂಲಿಗ್ಗೇರಿ ಮತ್ತು ಕೊಟನಕೇರಿ ಗ್ರಾಮದಲ್ಲಿ ೩೦೦ಕ್ಕಿಂತ ಹೆಚ್ಚು ಕುಟುಂಬಗಳಿದ್ದು, ಸಾಕಷ್ಟು ವರ್ಷಗಳಿಂದ ನೀರಿನ ಸಮಸ್ಯೆ ಇದೆ. ಜೆಜೆಎಂ ಅನುಷ್ಠಾನದ ಬಳಿಕ ಸಮಸ್ಯೆ ನೀಗಲಿದೆ ಎಂದರು.
ಕಾಮಗಾರಿಗೆ ಚಾಲನೆ ನೀಡುವ ಮುನ್ನ ಶ್ರೀ ಭೂತರಾಯನ ಗುಡಿ ಪೂಜೆ ನೆರವೇರಿಸಲಾಯಿತು. ಪ್ರಮುಖರಾದ ಚಿನ್ನಮ್ಮ, ಸುಶೀಲಮ್ಮ, ಕಿಶೋರ್, ಲೋಕೇಶ್, ಮುರುಗೇಶ್, ಅಬೂಬಕರ್, ಸುಧಾಕರ್, ಚಂದ್ರಶೇಖರ್, ನಾಗೇಶ್, ಗಣೇಶ್, ಸುನೀಲï, ಲಿಂಗಪ್ಪ, ಅಶೋಕ, ಅರ್ಚಕ ಸುಬ್ರಹ್ಮಣ್ಯ ನಾವುಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net