ಗ್ಯಾರಂಟಿಗಳ ಅನುಷ್ಠಾನಕ್ಕೆ ಕಾಲಾವಕಾಶ ಬೇಕು

V S PATIL
Published on

ಯಲ್ಲಾಪುರ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಅನುಷ್ಠಾನಕ್ಕೆ ಕಾಲಾವಕಾಶ ಬೇಕು. ಈ ನಡುವೆ ಬಿಜೆಪಿಯವರು ಸಹಕಾರ ನೀಡುವುದನ್ನು ಬಿಟ್ಟು ಪ್ರತಿಭಟನೆ ಮಾಡುತ್ತೇವೆ ಎಂದು ಹತಾಶೆಯಿಂದ ಹೇಳುವುದು ಸರಿಯಲ್ಲ ಎಂದು ಮಾಜಿ ಶಾಸಕ ವಿ.ಎಸ್. ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯವರಿಗೆ ಜನರಿಗೆ ಒಳ್ಳೆಯದು ಮಾಡುವ ಅಪೇಕ್ಷೆ ಇದ್ದರೆ, ಸಹಕಾರ ಕೊಡಬೇಕು. ಅದು ಬಿಟ್ಟು ಜನರಲ್ಲಿ ತಪ್ಪು ಅಭಿಪ್ರಾಯ, ಗೊಂದಲ ಮೂಡಿಸುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು. ಬಡವರಿಗೆ ಅನುಕೂಲ ಆಗುವ ಕಾರ್ಯಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್. ಗಾಂವ್ಕಾರ ಮಾತನಾಡಿ, ಬಿಜೆಪಿಯವರು ಸರ್ಕಾರ ನೀಡುವ ಗ್ಯಾರಂಟಿಗಳಿಗೆ ಬಿಟ್ಟಿಭಾಗ್ಯ ಎಂದು ಲೇವಡಿ ಮಾಡುತ್ತಿದ್ದಾರೆ. ಜನರ ತೆರಿಗೆ ಹಣವನ್ನೇ ಬಡವರು, ಅಸಹಾಯಕರ ನೆರವಿಗೆ ಸರ್ಕಾರ ಗ್ಯಾರಂಟಿ ಯೋಜನೆ ಮೂಲಕ ನೀಡುತ್ತಿದೆ. ಹೀಗಿರುವಾಗ ಬಡವರ ಬಗೆಗಿನ ಕಾರ್ಯಕ್ರಮಗಳನ್ನು ಅಪಹಾಸ್ಯ ಮಾಡುತ್ತಿರುವುದು ಖಂಡನೀಯ ಎಂದರು.

ಕಾಂಗ್ರೆಸ್ ಮುಖಂಡರಾದ ಎನ್.ಕೆ. ಭಟ್ಟ ಮೆಣಸುಪಾಲ್, ಕಾಂಗ್ರೆಸ್ ಪ್ರಮುಖರಾದ ಉಲ್ಲಾಸ ಶಾನಭಾಗ, ಎಂ.ಡಿ. ಮುಲ್ಲಾ,ೈರೋಜ್ ಶೇಖ್, ರವಿ ನಾಯ್ಕ, ನರಸಿಂಹ ನಾಯ್ಕ, ವಿ.ಎಸ್. ಭಟ್, ಎಸ್.ಎಂ.ಭಟ್, ಎನ್.ಎನ್. ಹೆಬ್ಬಾರ್, ಅನಿಲ್ ಮರಾಠೆ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net