ಅಭಿವೃದ್ಧಿಗೆ ಪೂರಕ ಯೋಜನೆಗಳ ಅನುಷ್ಠಾನ

ಗಂಗಾವತಿ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಮಾಲೋಚನೆ ಸಭೆಯಲ್ಲಿ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಮಾತನಾಡಿದರು. ಪ್ರಾಚಾರ್ಯೆ ಡಾ.ಮುಮ್ತಾಜ್ ಬೇಗಂ, ಪ್ರಾಧ್ಯಾಪಕರಾದ ಪ್ರೊ.ಜಗದೇವಿ ಕಲಶೆಟ್ಟಿ, ಡಾ.ಅನಿಲ್ ಎಡ್ವರ್ಡ್ ಇತರರಿದ್ದರು.

Published on

ಗಂಗಾವತಿ: ಕಾಲೇಜು ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಅನುಷ್ಠಾನಗೊಳಿಸಿ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು. ಹಲವು ವರ್ಷಗಳಿಂದ ದುಡಿಯುತ್ತಿರುವ ಡಿ ಗ್ರೂಪ್ ನೌಕರರ ಗೌರವಧನ ಹೆಚ್ಚಿಸಿ ಕ್ಯಾಂಟಿನ್ ಸಮಸ್ಯೆ ಬಗೆಹರಿಸಲಾಗುವುದು. ಕೆಲಸಕ್ಕೆ ಸೇರಿ 15 ವರ್ಷ ಪೂರೈಸಿದ ನೌಕರರಿಗೆ 7500 ರೂ. ದಿಂದ 12ಸಾವಿರ ರೂ. ವರೆಗೆ ಹಾಗೂ ಉಳಿದ ನೌಕರರಿಗೆ 10 ಸಾವಿರ ರೂ. ಗೌರವ ಧನ ನಿಗಪಡಿಸಲಾಗುವುದು. ಶೈಕ್ಷಣಿಕ ವಾತಾವರಣ ನಿರ್ಮಿಸಲು ಕಾಲೇಜಿನಲ್ಲಿ ಮೂಲ ಸೌಕರ್ಯ ಒದಗಿಸಲಾಗುವುದು. ಕಾಲೇಜು ಅಭಿವೃದ್ಧಿಗಾಗಿ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳೊಂದಿಗೆ ಚರ್ಚಿಸಲಾಗುವುದು. ಕಾಲೇಜಿನ ಅಭಿವೃದ್ಧಿ ಕುರಿತು ಪ್ರಾಚಾರ್ಯೆ ಡಾ.ಮುಮ್ತಾಜ್ ಬೇಗಂ ಮಾಹಿತಿ ನೀಡಿದರು.

ಪ್ರಾಧ್ಯಾಪಕರಾದ ಪ್ರೊ.ಜಗದೇವಿ ಕಲಶೆಟ್ಟಿ, ಡಾ.ಅನಿಲ್ ಎಡ್ವರ್ಡ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net