

ಉಡುಪಿ: ರಾಜ್ಯ ಸರ್ಕಾರ ಎನಿವೇರ್ ನೋಂದಣಿ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಉಡುಪಿ ಜಿಲ್ಲೆಯ ಸಾರ್ವಜನಿಕರು ಯಾವುದೇ ಉಪನೋಂದಣಿ ಕಚೇರಿಗಳಲ್ಲಿ ಆಸ್ತಿ ನೋಂದಣಿ ಮಾಡಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಾರ್ವಜನಿಕರು ಸ್ಥಿರಾಸ್ತಿ ಇರುವ ವ್ಯಾಪ್ತಿಯ ಉಪನೋಂದಣಿ ಕಚೆೇರಿಯಲ್ಲಿ ಮಾತ್ರ ದಸ್ತಾವೇಜನ್ನು ನೋಂದಣಿ ಮಾಡಲು ಅವಕಾಶವಿದೆ. ಆದರೆ ಎನಿವೇರ್ ನೋಂದಣಿಯಲ್ಲಿ ದಸ್ತಾವೇಜನ್ನು ಜಿಲ್ಲೆಯ ಯಾವುದಾದರೂ ಉಪನೋಂದಣಿ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬಹುದು. ಆದುದರಿಂದ ಸಾರ್ವಜನಿಕರು ಎನಿವೇರ್ ನೋಂದಣಿಯ ಸದುಪಯೋಗಪಡಿಸಿಕೊಂಡು ಹತ್ತಿರದ ಅಥವಾ ನೋಂದಣಿಗೆ ಸ್ಲಾಟ್ ಲಭ್ಯವಿರುವಂತಹ ಕಚೆೇರಿ ಆಯ್ಕೆ ಮಾಡಿಕೊಳ್ಳಬಹುದು ಎಂದರು.
ಎನಿವೇರ್ ನೋಂದಣಿ ವ್ಯವಸ್ಥೆಯು ಸಾರ್ವಜನಿಕರಿಗೆ ಉಪಯುಕ್ತವಾಗಿದ್ದು, ದಸ್ತಾವೇಜಿನ ನೋಂದಣಿಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ. ನೋಂದಣಿಯಲ್ಲಿ ವಿಳಂಬವನ್ನು ತಡೆಗಟ್ಟುತ್ತದೆ. ನೋಂದಣಿ ಪ್ರಕ್ರಿಯೆ ಸುಲಭವಾಗುವುದಲ್ಲದೆ ಸಮಯವೂ ಉಳಿಯುತ್ತದೆ. ಉಪನೋಂದಣಿ ಕಚೆೇರಿಗಳಲ್ಲಿ ಜನದಟ್ಟಣೆ ಕಡಿಮೆಯಾಗುತ್ತದೆ. ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ನೋಂದಣಿ ಕೆಲಸ ಸಮಾನವಾಗಿ ಹಂಚಿಕೆಯಾಗುತ್ತದೆ. ಜಿಲ್ಲೆಯಲ್ಲಿ ಪ್ರತಿ ದಿನ ಸರಾಸರಿ 127 ನೋಂದಣಿಯಾಗುತ್ತಿದೆ ಎಂದರು.
ಗಡಿಗ್ರಾಮಗಳು ದಕ ವ್ಯಾಪ್ತಿಗೆ
ಮೂಲ್ಕಿ ಉಪನೋಂದಣಾಧಿಕಾರಿ ಕಚೇರಿ ವ್ಯಾಪ್ತಿಗೆ ಕಾಪು ತಾಲೂಕಿನ ಕೆಲವು ಗ್ರಾಮಗಳು ಒಳಪಟ್ಟಿದ್ದು, ಈ ಗ್ರಾಮದ ಜನರು ದ.ಕ. ಜಿಲ್ಲೆಯ ಯಾವುದಾದರೂ ನೋಂದಣಾಧಿಕಾರಿ ಕಚೇರಿಗೆ ತೆರಳಬಹುದು ಎಂದರು.
ಶೇ. 63ರಷ್ಟು ಆಧಾರ್ ಲಿಂಕ್
ಜಿಲ್ಲೆಯಲ್ಲಿ ಶೇ. 63ರಷ್ಟು ಆರ್ ಟಿಸಿಗಳಿಗೆ ಆಧಾರ್ ಲಿಂಕ್ ಮಾಡಲಾಗಿದೆ. ಜಿಲ್ಲೆಯಲ್ಲಿ 2816892 ಆರ್ ಟಿಸಿ ಗಳಿದ್ದು, ಇವುಗಳಲ್ಲಿ 18 ಲಕ್ಷ ಆರ್ ಟಿಸಿಗಳಿಗೆ ಆಧಾರ್ ಜೋಡಣೆ ಮಾಡಲಾಗಿದೆ. 4.30 ಲಕ್ಷ ಕನ್ವರ್ಷನ್ ಸೈಟ್ಗಳಿದ್ದು, 2.48 ಲಕ್ಷ ಆರ್ ಟಿಸಿಗಳು ಮೃತರ ವಾರಸುದಾರರಿಗೆ ವರ್ಗಾವಣೆಗೆ ಬಾಕಿ ಇದೆ. ಹೀಗಾಗಿ ಪೌತಿ ಖಾತೆ ನೋಂದಣಿ ಅಭಿಯಾನ ಶ್ರೀದಲ್ಲಿ ಶುರು ಮಾಡಲಾಗುವುದು. 85,233 ಸರ್ಕಾರಿ ಜಾಗಗಳನ್ನು ಗುರುತಿಸಲಾಗಿದ್ದು, ಶೇ.95ರಷ್ಟು ಆರ್ಟಿಸಿಗಳನ್ನು ಸಂಬಂಧಪಟ್ಟ ಆ್ಯಪ್ನಲ್ಲಿ ನೋಂದಣಿ ಮಾಡಲಾಗಿದೆ ಎಂದರು.
ಮಲ್ಪೆ ರಸ್ತೆ ಕೆಲಸ ಪ್ರಾರಂಭ
ಆದಿಉಡುಪಿ&ಮಲ್ಪೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಶ್ರೀ ಪ್ರಾರಂಭವಾಗಲಿದೆ. ಯೋಜನೆ ನೆಯಲ್ಲಿ ಅನೇಕ ಸರ್ವೆ ನಂಬರ್ ಗಳು ಬಿಟ್ಟು ಹೋದ ಕಾರಣ ಭೂಸ್ವಾಧಿನ ಪ್ರಕ್ರಿಯೆ ವಿಳಂಬವಾಗಿತ್ತು. ಇತ್ತೀಚೆಗೆ 2 ಸಭೆಗಳನ್ನು ನಡೆಸಿ ಭೂ ಮಾಲೀಕರ ಒಪ್ಪಿಗೆ ಪಡೆಯಲಾಗಿದೆ ಎಂದು ಹೇಳಿದರು.