

ರಾಯಚೂರು: ಏಳನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಗರ ಶಾಸಕ ಡಾ.ಶಿವರಾಜ ಪಾಟೀಲ್‌ಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದಿಂದ ಭಾನುವಾರ ಮನವಿ ಸಲ್ಲಿಸಲಾಯಿತು.
ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಸಿದಂತೆ ಹಿಂದಿನ ಸರ್ಕಾರದ ಅವಯಲ್ಲಿ ಏಳನೇ ವೇತನ ಆಯೋಗದ ವರದಿಯನ್ನು ಪಡೆಯಲಾಗಿತ್ತು. ಆದರೆ ಚುನಾವಣೆ ನಡೆದು ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿ ಏಳು ತಿಂಗಳು ಗತಿಸಿದರೂ ವರದಿ ಜಾರಿ ಮಾಡಲಾಗಿಲ್ಲ. ಕೂಡಲೇ ವರದಿ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರಬೇಕು.
ಎನ್‌ಪಿಎಸ್ ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಬೇಕು. ಸರ್ಕಾರಿ ನೌಕರರ ಮತ್ತು ಕುಟುಂಬದ ಸದಸ್ಯರಿಗೆ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ನೌಕರರ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಮಹಾಂತೇಶ ಬಿರಾದರ, ಪದಾಕಾರಿಗಳಾದ ಆಂಜಿನಯ್ಯ, ಹನುಮಂತಪ್ಪ, ದಂಡಪ್ಪ ಬಿರಾದರ, ಸುರೇಶ ರೆಡ್ಡಿ, ಅಮೃತ, ಸುರೇಶ ಭಂಡಾರಿ, ರಾಘವೇಂದ್ರ, ವಿಜಯಕುಮಾರ, ದೇವರಾಜ, ರವಿ, ನಿವೃತ್ತ ನೌಕರರ ಸಂಘದ ಶಂಕರಗೌಡ, ಮಹಾದೇವಪ್ಪ, ಮಲ್ಲಯ್ಯ ಉಪಸ್ಥಿತರಿದ್ದರು.