ಸಂತರ ಸಂದೇಶ ಜೀವನದಲ್ಲಿ ಅಳವಡಿಸಿಕೊಳ್ಳಿ

Published on

ಹುಬ್ಬಳ್ಳಿ: ಪ್ರತಿಯೊಬ್ಬರು ಸಂತರು, ಮಹಾತ್ಮರು, ದಾರ್ಶನಿಕರ ಸಂದೇಶಗಳನ್ನು ಅಳವಡಿಸಿಕೊಂಡು ತಮ್ಮ ಜೀವನವನ್ನು ಪಾವನ ಮಾಡಿಕೊಳ್ಳಬೇಕೆಂದು ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿ ಚೇರಮನ್ ಚನ್ನವೀರ ಮುಂಗರವಾಡಿ ಹೇಳಿದರು.

ಮಠದ ಆವರಣದಲ್ಲಿ ಡಾ. ಬಿ. ಎಸ್. ಮಾಳವಾಡ ಮತ್ತು ಎಚ್. ಮುರಲೀಧರ ಅವರು ಸಂಗ್ರಹಿಸಿದ ‘ಸದ್ಗುರು ಶ್ರೀ ಸಿದ್ಧಾರೂಢ ನಾಮಾವಳಿಗಳ ಗ್ರಂಥ’ ದ ಐದನೇ ಆವೃತ್ತಿ ಲೋಕಾರ್ಪಣೆ ಮಾಡಿ ಮಾತನಾಡಿ ಅವರು ಶ್ರೀ ಸಿದ್ಧಾರೂಢರ ನಾಮಾವಳಿ ಗ್ರಂಥವನ್ನು ಉಚಿತವಾಗಿ ಭಕ್ತರಿಗೆ ನೀಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಟ್ರಸ್ಟ್ ಸದಸ್ಯರಾದ ಮಂಜುನಾಥ ಮುನವಳ್ಳಿ, ಉದಯಕುಮಾರ ನಾಯಕ, ಮಹೇಶ, ಸಾಹಿತಿ ಕೆ. ಶಾಂತಾ ಬಸವರಾಜ, ಮಠದ ಮ್ಯಾನೇಜರ ಈರಣ್ಣ ತುಪ್ಪದ, ಪೊ›. ಕೆ.ಎಸ್. ಕೌಜಲಗಿ, ವಾಣಿ ಮುರಲೀಧರ, ಎಚ್. ಮುರಲೀಧರ, ಡಾ. ಬಿ.ಎಸ್. ಮಾಳವಾಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net