ರೈತರ ಸಬಲೀಕರಣಕ್ಕೆ ಪೂರಕ ಯೋಜನೆ ಜಾರಿಮಾಡಿ

18 ckm 3
ಚಿಕ್ಕಮಗಳೂರು ಹೊರವಲಯದ ಕುರುವಂಗಿ ಗ್ರಾಮದಲ್ಲಿ ಭಾನುವಾರ ಹಿರೇಮಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಶಾಖೆಯ ನೂತನ ಕಟ್ಟಡವನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಉದ್ಘಾಟಿಸಿದರು. ಕೇಶವ ಮೂರ್ತಿ, ನೀಲಶೆಟ್ಟಿ, ಎಚ್.ಸಿ.ಕಲ್ಮರುಡಪ್ಪ, ನೆಟ್ಟೆಕರೆಹಳ್ಳಿ ಜಯಣ್ಣ, ಸಿ.ಎನ್.ಸತೀಶ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಸಹಕಾರ ಸಂಘಗಳು ಹೆಚ್ಚು ಹೆಚ್ಚು ರೈತರಿಗೆ ಸಾಲದ ನೆರವು ಕೊಡುವ ಜೊತೆಗೆ ಪಿಗ್ಮಿ ಇನ್ನಿತರೆ ಬೇರೆ ಬೇರೆ ಹಣಕಾಸು ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.

ನಗರದ ಹೊರವಲಯದ ಕುರುವಂಗಿ ಗ್ರಾಮದಲ್ಲಿ ಭಾನುವಾರ ಹಿರೇಮಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಶಾಖೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಜನರಿಂದ ಜನರಿಗಾಗಿ ಸಹಕಾರಿಗಳೆಲ್ಲಾ ಸೇರಿ ಸಹಕಾರ ಸಂಘ ಸ್ಥಾಪಿಸಿ ಕುರುವಂಗಿ ಶಾಖಾ ಕಟ್ಟಡ ನಿರ್ಮಿಸಲಾಗಿದೆ. ಇದರಿಂದ ಹೆಚ್ಚು ರೈತರಿಗೆ ಅನುಕೂಲವಾದರೆ ನಮಗೂ ಸಮಾಧಾನ ಎಂದರು.
ಸಹಕಾರ ಸಂಘಗಳಲ್ಲಿ ಈಗ ೩ ಲಕ್ಷ ರೂ. ವರೆಗೆ ಕೃಷಿ ಸಾಲಕ್ಕೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ. ಕೃಷಿಕರು ಸ್ವಾಲಂಭಿಗಳಾಗಬೇಕು. ಸಾಲದ ಕಾರಣಕ್ಕೆ ಪರಾವಲಂಬಿಗಳಾಗಬಾರದು ಎನ್ನುವ ಹಿನ್ನೆಲೆಯಲ್ಲಿ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ರಾಜ್ಯದಲ್ಲಿ ಅನುಷ್ಠಾನಕ್ಕೆ ತಂದರು. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗ ೩ ರೂ. ಬಡ್ಡಿ ದರದಲ್ಲಿ ಸಾಲ ಕೊಡುವ ವ್ಯವಸ್ಥೆ ತಂದಿದ್ದರು. ಈಗ ಕೇಂದ್ರ ಸರ್ಕಾರವೇ ಬಡ್ಡಿ ರಹಿತವಾಗಿ ಸಾಲ ಕೊಡುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ ಎಂದು ಹೇಳಿದರು.
ಭ್ರಷ್ಟಾಚಾರ, ಹಣದ ದುರುಪಯೋಗಕ್ಕೆ ಆಸ್ಪದ ಇಲ್ಲದೆ ನಿರ್ವಹಣೆ ಮಾಡುವ ಮೂಲಕ ಹೆಚ್ಚು ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ತಿಳಿಸಿದರು.
ಸಂಘದ ನಿರ್ದೇಶಕ ಕೇಶವ ಮೂರ್ತಿ ಮಾತನಾಡಿ, ಕೇವಲ ಎರಡು ತಿಂಗಳಲ್ಲಿ ಸಂಘಕ್ಕೆ ಒಂದು ಕಟ್ಟಡ ನಿರ್ಮಿಸಲು ಹಲವರು ಸಹಕರಿಸಿದ್ದಾರೆ. ಇಷ್ಟು ದಿನ ನೀಡುತ್ತಿದ್ದ ಕಟ್ಟಡ ಬಾಡಿಗೆ ಉಳಿತಾಯವಾಗುತ್ತದೆ ಎಂದರು.
ಹಿAದೆ ಸಂಘದ ಸುಮಾರು ೧ ಕೋಟಿಗೂ ಹೆಚ್ಚು ಹಣ ದುರುಪಯೋಗವಾಗಿತ್ತು. ಈ ಸಂಬAಧ ಇಬ್ಬರಿಗೆ ಜೈಲು ಶಿಕ್ಷೆ ಆಗಿದ್ದೂ ಅಲ್ಲದೆ ದುರುಪಯೋಗಪಡಿಸಿಕೊಂಡಿದ್ದ ಹಣವನ್ನು ವಸೂಲು ಮಾಡಲಾಗುತ್ತಿದೆ. ಈಗಾಗಲೇ ೬೦ ಲಕ್ಷ ರೂ.ಗಳ ಸಾಲವನ್ನು ವಿತರಿಸಲಾಗಿದೆ. ಇನ್ನೂ ೪೦ ಲಕ್ಷ ರೂ. ಸಾಲ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಸಹಕಾರ ಸಂಘದ ಅಧ್ಯಕ್ಷ ನೀಲಶೆಟ್ಟಿ, ಬಿಜೆಪಿ ಮುಖಂಡರಾದ ಎಚ್.ಸಿ.ಕಲ್ಮರುಡಪ್ಪ, ನೆಟ್ಟೆಕರೆಹಳ್ಳಿ ಜಯಣ್ಣ ಸಹಕಾರ ಸಂಘದ ಉಪಾಧ್ಯಕ್ಷರಾದ ಸಿ.ಎನ್.ಸತೀಶ್, ನಿರ್ದೇಶಕರಾದ ಎಂ.ಜಗದೀಶ್, ಎಚ್.ಎಂ.ಯೋಗೀಶ್, ಸಿ.ಎಲ್.ಲೋಕೇಶ್, ಎಚ್.ಕೆ.ಕೇಶವಮೂರ್ತಿ, ಎಚ್.ಸಿ.ಗಂಗಾಧರ್, ಎಂ.ಎನ್.ಮಲ್ಲುAಡಪ್ಪ, ಗಂಗಮ್ಮ, ಕೆ.ಆರ್.ಜಯಲಕ್ಷ್ಮೀ, ಪವನ್‌ಕುಮಾರ್, ಮುಖ್ಯ ಕಾರ್ಯದರ್ಶಿ ಆಶಿಕ್, ಮಾರಾಟ ಗುಮಾಸ್ತ ಅನಿಲ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net