

ಮುಂಡರಗಿ: ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ, ಸಮಾಜಕ್ಕೆ ನಾವೇನು ಕೊಟ್ಟಿದ್ದೇವೆ ಎನ್ನುವುದು ಮುಖ್ಯ. ಸಮಾಜ ಸಂಘಟಿತವಾದಷ್ಟೂ ಬಲ ಹೆಚ್ಚುತ್ತದೆ. ಪಂಚಮಸಾಲಿ ಸಮಾಜದವರು ಸಂಘಟಿತರಾಗಿ ಸೌಲಭ್ಯಗಳನ್ನು ಪಡೆಯಬೇಕು ಎಂದು ಪಂಚಮಸಾಲಿ ಶಹರ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಹೊಟ್ಟಿನ ಹೇಳಿದರು.
ಪಟ್ಟಣದಲ್ಲಿ ಪಂಚಮಸಾಲಿ ಶಹರ ಮಹಿಳಾ ಘಟಕದ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮನೆ-ಮನದಲ್ಲಿ ಚನ್ನಮ್ಮ ಕಾರ್ಯಕ್ರಮ ಮತ್ತು ಕಿತ್ತೂರು ಚನ್ನಮ್ಮ ಅವರ 196ನೇ ಪುಣ್ಯಸ್ಮರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮನೆ-ಮನೆಗಳಲ್ಲಿ ಚನ್ನಮ್ಮನ ಸ್ಮರಣೆ ನಡೆಯಬೇಕು. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಪಂಚಮಸಾಲಿ ಸಮಾಜದ ತಾಲೂಕು ಸಲಹಾ ಸಮಿತಿಯ ಹಿರಿಯ ಸದಸ್ಯ ವೀರನಗೌಡ ಗುಡದಪ್ಪನವರ ಮಾತನಾಡಿ, ಮನೆ-ಮನಗಳಲ್ಲಿ ಚನ್ನಮ್ಮ ಕಾರ್ಯಕ್ರಮದಲ್ಲಿ ಕೃಷಿ, ಪರಿಸರ, ಉದ್ಯೋಗ ಮುಂತಾದ ಮಾಹಿತಿ ಮತ್ತು ಜಾಗೃತಿವುಳ್ಳ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಹಾಕಿಕೊಳ್ಳಬೇಕು ಎಂದರು.
ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಎಸ್.ವಿ. ಪಾಟೀಲ ಮಾತನಾಡಿ, ಪಟ್ಟಣದಲ್ಲಿ ಸಮಾಜದ ಕಲ್ಯಾಣ ಮಂಟಪ ನಿರ್ಮಾಣ ಭರದಿಂದ ಸಾಗಿದೆ. ಅನೇಕರು ಸಹಕಾರ ನೀಡಿದ್ದಾರೆ. ಉಳಿದವರು ಸಹಾಯ, ಸಹಕಾರ ನೀಡಬೇಕು ಎಂದು ತಿಳಿಸಿದರು.
ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮತ್ತು ಸದಸ್ಯ ನಾಗರಾಜ ಹೊಂಬಳಗಟ್ಟಿ ಮಾತನಾಡಿದರು. ಶಿಕ್ಷಕಿ ದೀಪುಶ್ರೀ ಕಣವಿ ಅವರು ಕಿತ್ತೂರು ಚನ್ನಮ್ಮನ ಕುರಿತು ಉಪನ್ಯಾಸ ನೀಡಿದರು.
ಆರ್.ವೈ. ಪಾಟೀಲ, ಎ.ವೈ. ನವಲಗುಂದ, ಎಂ.ಎಸ್. ಹೊಟ್ಟಿನ, ಎಸ್.ಎಸ್. ಇನಾಮತಿ, ಡಾ.ಎ.ಎಂ. ಮೇಟಿ, ಡಾ.ವಿ.ಕೆ. ಸಂಕನಗೌಡ್ರ, ಅಶೋಕ ಹಂದ್ರಾಳ, ರಜನಿಕಾಂತ ದೇಸಾಯಿ, ಸೋಮಣ್ಣ ದೇಸಾಯಿ, ನಾಗರಾಜ ಮುರಡಿ, ರಾಜೇಶ ಅರಕಲ್, ಎನ್.ಎಂ. ಕುಕನೂರ, ಪ್ರಮೋದ ಇನಾಮತಿ, ಎನ್.ಎಫ್. ಅಕ್ಕೂರ, ಶಕುಂತಲಾ ಗುಡದಪ್ಪನವರ, ಮಂಜುನಾಥ ಮುಧೋಳ, ನಾಗರಾಜ ಉಳ್ಳಾಗಡ್ಡಿ, ಪ್ರಶಾಂತ, ಪ್ರದೀಪ ಗುಡದಪ್ಪನವರ ಇತರರಿದ್ದರು. ಆರ್.ಎಲ್. ಪೊಲೀಸ್‌ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೀಲಾ ಅಕ್ಕೂರ ಪ್ರಾರ್ಥಿಸಿದರು. ಶ್ರೀದೇವಿ ಗುಡದಪ್ಪನವರ ಸ್ವಾಗತಿದರು. ನೇತ್ರಾ ಭಾವಿಹಳ್ಳಿ ನಿರೂಪಿಸಿದರು. ಶ್ರೀದೇವಿ ಗೋಡಿ ವಂದಿಸಿದರು.