

ರಾಯಚೂರು: ಕನ್ನಡ ನಾಮಫಲಕ ಅಳವಡಿಕೆ ಆದೇಶಕ್ಕೆ ಬೆಳಗಾವಿಯಲ್ಲಿ ಎಂಇಎಸ್ ತೆಗೆದಿರುವ ತಕರಾರು ಖಂಡನೀಯವಾಗಿದ್ದು, ಸರ್ಕಾರ ಕೂಡಲೇ ಬೆಳಗಾವಿಯಲ್ಲಿ ಆದೇಶವನ್ನು ಕಾರ್ಯರೂಪಕ್ಕೆ ತರಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ಒತ್ತಾಯಿಸಿದೆ.
ಸಮಿತಿ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಗುರುವಾರ ಮನವಿ ಸಲ್ಲಿಸಿ, ಬೆಳಗಾವಿ ಕರ್ನಾಟಕದಲ್ಲಿದ್ದರೂ ಮಹಾರಾಷ್ಟ್ರ ಏಕೀಕರಣ ಸಮಿತಿ ಕನ್ನಡ ನಾಮಲಕ ಅಳವಡಿಕೆಗೆ ವಿರೋಧ ವ್ಯಕ್ತಪಡಿಸಿರುವುದು. ನಾಮಲಕ ಅಳವಡಿಕೆಗೆ ವಿರೋಸುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ. ಆದರೆ ಎಂಇಎಸ್ ವಿನಾಕಾರಣ ಕನ್ನಡಿಗರನ್ನು ಕೆರಳಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ನಮ್ಮ ರಾಜ್ಯದಲ್ಲಿರುವ ಮರಾಠಿಗರು ಈ ನೆಲದ ನಿಯಮಗಳಿಗೆ ಬದ್ಧರಾಗಿರಬೇಕು. ಅಡ್ಡಿ ಪಡಿಸುವ ಕನ್ನಡ ದ್ರೋಹಿಗಳನ್ನು ಬಂಸಿ ಕಾನೂನು ಕ್ರಮಕೈಗೊಳ್ಳಬೇಕು.
ಜತೆಗೆ ಮಹಾರಾಷ್ಟ್ರದ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಸೊಲ್ಲಾಪುರ, ಅಕ್ಕಲಕೋಟೆ, ಪೂಣೆ, ಸಾಂಗ್ಲಿ, ಕೊಲ್ಲಾಪುರಗಳನ್ನು ಕರ್ನಾಟಕಕ್ಕೆ ಸೇರಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಸಮಿತಿ ಗೌರವಾಧ್ಯಕ್ಷ ರಫೀಕ್ ಅಹ್ಮದ್, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ನಡುವಿನಮನಿ, ಪದಾಕಾರಿಗಳಾದ ಬಷೀರುದ್ದೀನ್ ಹೊಸಮನಿ, ರಾಮಣ್ಣ, ರುದ್ರಯ್ಯ ಗುಣಾರಿ, ಹನುಮಂತ ಆಲೂರು ಇದ್ದರು.