ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿಕೆ; ಬಸವಾದಿ ಶರಣರ ತತ್ವ- ಸಿದ್ಧಾಂತ ಅಳವಡಿಕೆ ಅಗತ್ಯ

30 Dwd 1
Published on

ಧಾರವಾಡ: ಅನ್ನ ದಾಸೋಹದ ಜೊತೆಗೆ ಜ್ಞಾನ ದಾಸೋಹಕ್ಕೂ ಶ್ರಮಿಸಿದ ಅರಟಾಳ ರುದ್ರಗೌಡರು, ಶಿರಸಂಗಿ ಲಿಂಗರಾಜ ದೇಸಾಯಿ, ಸರ್ ಸಿದ್ದಪ್ಪ ಕಂಬಳಿ, ವಾರದ ಮಲ್ಲಪ್ಪ, ಶ್ರೀ ಮೃತ್ಯುಂಜಯಪ್ಪನವರು ಸದಾಕಾಲ ಪ್ರಾತಃಸ್ಮರಣೀಯರು. ಈ ಲಿಂಗಾಯತ ಪುಣ್ಯಪುರುಷರು ಶಿಕ್ಷಣ ಸಂಸ್ಥೆಗಳನ್ನು ತೆರೆದು ಎಲ್ಲ ಸಮಾಜದ ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ಮಾಡಿದರು. ಲಿಂಗಾಯತರು ಅವರ ಆದರ್ಶನಗಳನ್ನು ಮೈಗೂಡಿಸಿಕೊಂಡು ವೈದಿಕ ಸಂಪ್ರದಾಯದಿAದ ಹೊರಬರಬೇಕು. ಬಸವಾದಿ ಶರಣರ ತತ್ವ- ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕು ಎಂದು ಮುಂಡರಗಿ ತೋಂಟದಾರ್ಯಮಠದ ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಜಿ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದಿಂದ ಇಲ್ಲಿನ ಲಿಂಗಾಯತ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಯುಗದ ಸಿರಿ' ಹಾಗೂಯುಗದ ಬೆಳಕು' ಕೃತಿಗಳ ಲೋಕಾರ್ಪಣೆ ಮತ್ತು ಯುವ ಘಟಕದ ನೂತನ ಪದಾಽಕಾರಿಗಳ ಪದಗ್ರಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕೃತಿಗಳನ್ನು ಲೋಕಾರ್ಪಣೆ ಮಾಡಿದ ಆಕಾಶವಾಣಿ ನಿವೃತ್ತ ನಿರ್ದೇಶಕ ಸಿ.ಯು. ಬೆಳ್ಳಕ್ಕಿ ಮಾತನಾಡಿ, ಯ.ರು. ಪಾಟೀಲರ ಎರಡೂ ಕೃತಿಗಳಲ್ಲಿ ಬಳಸಿದ ಭಾಷೆ, ಹೆಣೆದ ಕಥಾಹಂದರ ಅಚ್ಚುಕಟ್ಟಾಗಿದೆ ಎಂದರು.
ಡಾ. ಶ್ಯಾಮಸುಂದರ ಬಿದರಕುಂದಿ ಹಾಗೂ ಡಾ. ಶಶಿಧರ ತೋಡಕರ ಕೃತಿ ಪರಿಚಯಿಸಿದರು. ಕೃತಿಕಾರ ಯ.ರು. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಹೆಬಸೂರ ಮಹಾಸಭೆಯ ಯುವ ಘಟಕದ ಅಧ್ಯಕ್ಷರಾಗಿ ಹಾಗೂ ಆನಂದ ಗಡೇಕಾರ ಪ್ರಧಾನ ಕಾರ್ಯದರ್ಶಿಯÁಗಿ ಅಽಕಾರ ಸ್ವೀಕರಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಗುರುರಾಜ ಹುಣಶಿಮರದ ಅಧ್ಯಕ್ಷತೆ ವಹಿಸಿದ್ದರು.
ಸಾಹಿತಿ ಡಾ. ರಾಜೇಶ್ವರಿ ಮಹೇಶ್ವರಯ್ಯ, ಶಿವಶರಣ ಕಲಬಶೆಟ್ಟರ, ಸಿದ್ದಣ್ಣ ಕಂಬಾರ, ಬಸವರಾಜ ಗೊಲಪ್ಪನವರ, ಎಂ.ಎ. ಹಿರೇಮಠ, ಮಲ್ಲಪ್ಪ ಬಾವಿ, ಶರಣಪ್ಪ ಗೌಡ ಗುಜಮಾಡಿ ಸಿದ್ದರಾಮಣ್ಣ ನಡಕಟ್ಟಿ ಬಸವಂತಪ್ಪ ತೋಟದ, ಶಂಕರ ಕುಂಬಿ, ಎನ್.ಎಸ್. ಬಿರಾದಾರ, ವಿಜಯಲಕ್ಷಿ ಕಲ್ಯಾಣಶೆಟ್ಟರ, ಪ್ರಭಾವತಿ ವಡ್ಡೀನ, ಸಂಧ್ಯಾ ಅಂಬಡಗಟ್ಟಿ, ರಾಜಶೇಖರ ಉಪ್ಪಿನ, ಮಡಿವಾಳಪ್ಪ ಸಿರಿಯಣ್ಣವರ ಹಾಗೂ ಪದಾಽಕಾರಿಗಳು ಉಪಸ್ಥಿತರಿದ್ದರು.
ಬಿ.ವೈ. ಪಾಟೀಲ ಸ್ವಾಗತಿಸಿದರು. ಬಸವರಾಜೇಶ್ವರಿ ಕೆಂಗಲ ನಿರೂಪಿಸಿದರು. ಶಿವಾನಂದ ಕವಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net